ಮೂಡುಬಿದಿರೆ : ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದ ಶ್ರೀ ದುರ್ಗಾದೇವಿ ಇಂಗ್ಲಿಷ್ ಮೀಡಿಯಂ ಶಾಲೆಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿಗಳಾದ ಆಧ್ಯಾ ಡಿ ಶೆಟ್ಟಿ 625ಕ್ಕೆ 603 ಅಂಕಗಳನ್ನು ಪಡೆಯುವ ಮೂಲಕ ಶೇ. 96.48ರಷ್ಟು ಸಾಧನೆ ಮಾಡಿದ್ದಾರೆ. ಅನ್ವಿತಾ ಎ ಕುಲಾಲ್ 584 ಅಂಕ, ಯಕ್ಷಿತ್ ಎಲ್. ಸಾಲ್ಯಾನ್ 581 ಅಂಕ ಹಾಗೂ ಸಿಯಾ ಪಿ ಸುವರ್ಣ 581 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಶ್ರಾವ್ಯ ಆರ್.ಆಚಾರ್ಯ (572 ಅಂಕ), ವಿಘ್ನೇಶ್ವರ ರಾವ್ (567 ಅಂಕ), ಶ್ರೇಯಾ ಎಸ್ ಶೆಟ್ಟಿ (556 ಅಂಕ), ಲಾವಣ್ಯ (546 ಅಂಕ), ಯಶ್ ಶೆಟ್ಟಿ (546 ಅಂಕ) ಮತ್ತು ಕೃತಿಕಾ ಎಸ್ ದಾಸ್ (533 ಅಂಕ) ಪಡೆದಿದ್ದಾರೆ. ಈ ಅಮೋಘ ಸಾಧನೆಯ ಜೊತೆಗೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಶಾಲೆಯ ಒಟ್ಟಾರೆ ಶೈಕ್ಷಣಿಕ ಗುಣಮಟ್ಟ ಹಾಗೂ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಗುರುತಿಸಿ ‘ಎ’ ಗ್ರೇಡ್ (A Grade) ಮಾನ್ಯತೆ ನೀಡಿ ಗೌರವಿಸಿದೆ. ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ದೇವಸ್ಯ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಅಭಿನಂದಿಸಿದ್ದಾರೆ.