ಮೂಡುಬಿದಿರೆ: ಪಾಲಡ್ಕ ಸಂತ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆಯು ಹತ್ತನೇ ತರಗತಿಯ ಸಾರ್ವಜನಿಕ ಪರೀಕ್ಷೆಯಲ್ಲಿ ಈ ವರ್ಷವೂ ಶೇ.100 ಫಲಿತಾಂಶ ದಾಖಲಿಸಿ ಸತತ ಎಂಟು ವರ್ಷಗಳ ಸಾಧನೆಯನ್ನು ಮುಂದುವರಿಸಿದೆ. ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 22 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮಹತ್ವದ ಸಾಧನೆಗೆ ಕಾರಣರಾದ ಎಲ್ಲಾ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆಗಳನ್ನು ತಿಳಿಸಿದೆ.
ಎಸ್.ಎಸ್.ಎಲ್.ಸಿ: ಪಾಲಡ್ಕ ಸಂತ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆಗೆ ಸತತ 8ನೇ ವರ್ಷಗಳಿಂದ ಶೇ.100 ಫಲಿತಾಂಶ
ಎಸ್.ಎಸ್.ಎಲ್.ಸಿ: ಪಾಲಡ್ಕ ಸಂತ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆಗೆ ಸತತ 8ನೇ ವರ್ಷಗಳಿಂದ ಶೇ.100 ಫಲಿತಾಂಶ