ಮೂಡಬಿದಿರೆ: ಮಣಿಕಂಠ ಬಾಲಗೋಕುಲ ಹಾಗೂ ಮಣಿಕಂಠ ಭಜನಾ ಮಂಡಳಿ ಪೆರಾಡಿ ಇದರ ಮಣಿಕಂಠ ಭಜನೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಶನಿವಾರ ಸಂಜೆ ವಾಣಿಜ್ಯ ಸಂಕೀರ್ಣದ ಧನುಷ್ ಸಭಾಭವನದ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಂಗಳೂರು ವಿಭಾಗದ ಸಹಪ್ರಭಾರಿ ಜಯಂತ್ ಕೋಟ್ಯಾನ್ ಮರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರತ್ನಾಕರ ಬುಣ್ಣನ್ , ಸತೀಶ್ ಕೆ ಕಾಶಿಪಟ್ಣ, ದಯಾನಂದ ಬಂಗೇರ, ಯಶೋಧರಾ ಆಚಾರ್ಯ, ಗಣೇಶ್ ಕರ್ಕೇರ, ಭಾಸ್ಕರ್ ಜೆ ಸಾಲ್ಯಾನ್, ರಂಜಿತ್ ಶೆಟ್ಟಿ, ರವಿ ಕುಲಾಲ್ , ಸಂತೋಷ್ ಪೂಜಾರಿ, ಶಾಲಿನಿ ರಘು ಕುಲಾಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಏ.18: ಪೆರಾಡಿಯಲ್ಲಿ ಮಣಿಕಂಠ ಭಜನೋತ್ಸವ, ಸಾಂಸ್ಕೃತಿಕ ವೈಭವ
ಏ.18: ಪೆರಾಡಿಯಲ್ಲಿ ಮಣಿಕಂಠ ಭಜನೋತ್ಸವ, ಸಾಂಸ್ಕೃತಿಕ ವೈಭವ