ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವವು ಏ.14 ರಿಂದ 29 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಏ.14 ರಂದು ಮಧ್ಯಾಹ್ನ ಗಂಟೆ 12 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ಏ.15ರಂದು ಬೆಳಗ್ಗೆ ಯುಗಾದಿ ಬಲಿ ಹಾಗೂ ನಿತ್ಯ ಉತ್ಸವ ಜರುಗಲಿದೆ. ಏ.18 ರಂದು ಹೂವಿನ ರಥೋತ್ಸವ ಹಾಗೂ ಸಾಯಂಕಲ ದೇವರ ಮೂಲಸ್ಥಾನವಾದ ದೇವರಗುಡ್ಡೆಗೆತೆರಳಿ ಸ್ಥಳಪೂಜೆ ಸಲ್ಲಿಸಲಾಗುವುದು. ಏ.20 ರಂದು ಭೂಮಂಡಲ ರಥೋತ್ಸವ, 22ರಂದು ಕೆರೆ ದೀಪೋತ್ಸವ ಹಾಗೂ 23ರಂದು ಸವಾರಿ ಉತ್ಸವಗಳು ನಡೆಯಲಿವೆ. ಏ.24 ರಂದು ಬಾಕಿಮಾರು ದೀಪೋತ್ಸವ ಹಾಗೂ 25ರಂದು ಗುಡ್ಡೆ ತೇರು ಜರುಗಲಿದೆ. ಏ.26 ರಂದು ಸಾಯಂಕಾಲ ಆಳುಪಲ್ಲಕ್ಕಿ ಉತ್ಸವ ಹಾಗೂ ನಂತರ ದೇವರುಗಳ ಬಲಿ ನಡೆಯಲಿದೆ. ಏ. 27 ರಂದು ಮಧ್ಯಾಹ್ನ ಹಗಲು ರಥೋತ್ಸವ ಜರುಗಲಿದೆ. 28ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆಗಳು, ರಾತ್ರಿ ಅವಭೃತ ಹಾಗೂ ಧ್ವಜಾವರೋಹಣ ನಡೆಯಲಿದೆ. ಏ.29ರಂದು ಸಂಪ್ರೋಕ್ಷಣೆ, ಮಂತ್ರಾಕ್ಷತೆ ಹಾಗೂ ಶ್ರೀ ಪಂಚಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವದೊಂದಿಗೆ ಉತ್ಸವವು ಸಂಪನ್ನಗೊಳ್ಳಲಿದೆ. ಸಾAಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಏ.15ರಂದು ಪಾವಂಜೆ ಮೇಳದವರಿಂದ ಪಾಪಣ್ಣ ವಿಜಯ ಗುಣಸುಂದರಿ' ಯಕ್ಷಗಾನ ಹಾಗೂ 17ರಂದು ಕಟೀಲು ಮೇಳದವರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 18ರಂದು ಪುಂಜಾಲಕಟ್ಟೆ ತಾಂಬೂಲ ಕಲಾವಿದರಿಂದ ಎಲ್ಲೆ ದಾದ ಏರೆಗ್ ಗೊತ್ತು' ತುಳು ನಾಟಕ ನಡೆಯಲಿದೆ. 20ರಂದು ಬೆದ್ರ ಕಲಾವಿದರಿಂದ ನಾಲಾಯಿ ಮಗುರುಜಿ' ತುಳು ನಾಟಕ ಪ್ರದರ್ಶನಗೊಳ್ಳಲಿದೆ. 24ರಂದು ಬೆದ್ರ ಪಿಂಗಾರ ಕಲಾವಿದರಿಂದ ಕದಂಬ' ಹಾಗೂ 25ರಂದು ಬೆದ್ರ ಕುರಲ್ ಕಲಾವಿದರಿಂದ ತೀರ್ಥ ನಾಟಕಗಳು ಪ್ರದರ್ಶನಗೊಳ್ಳಲಿವೆ. ಏ.26 ರಂದು ನೃತ್ಯಾಂಜಲಿ, ನಾಟ್ಯ ವೈಭವ ಹಾಗೂ ಕೆರೆಕಾಡು ಮೇಳದವರಿಂದ ಸತ್ವ ಶೈಥಿಲ್ಯ' ಯಕ್ಷಗಾನ ನಡೆಯಲಿದೆ. ಏ.27ರಂದು ಕಲ್ಲಡ್ಕ ವಿಠಲ್ ನಾಯ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ' ಆಯೋಜಿಸಲಾಗಿದೆ ಎಂದು ಆನುವಂಶಿಕ ಆಡಳಿತ ಮೊಕೇಸರ ಕುಲದೀಪ ಎಂ. ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಪಿ. ಅನಂತಕೃಷ್ಣ ಭಟ್ ತಿಳಿಸಿದ್ದಾರೆ.