ಮೂಡುಬಿದಿರೆ: ಯುವ ಲೇಖಕಿ, ವಾಗ್ಮಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರು ಆಧುನಿಕ ಭಾರತದ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. “ಪರ್ಸನಾಲಿಟಿ ಆಫ್ ಇಂಡಿಯಾ” ಪತ್ರಿಕೆ ಅವರು ಹೊಸ ಭಾರತದ ಧ್ವನಿಯನ್ನು ರೂಪಿಸುವ ಯುವ ಶಕ್ತಿಯಾಗಿ, ಹಾಗೂ ಪದಗಳ ಮೂಲಕ ಉದ್ದೇಶಪೂರ್ಣ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವ ವ್ಯಕ್ತಿತ್ವವಾಗಿ ಚಿತ್ರಿಸಿದೆ. ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾದ ಇವರು, ಭಾರತ @2047 ಯುವಕರ ಪಾತ್ರ ಹಾಗೂ ಪ್ರಜಾಪ್ರಭುತ್ವದ ಸುರಾಜ್ಯ ಉತ್ತಮ ಆಡಳಿತ ಚಕ್ರದಂತಹ ವಿಷಯಗಳ ಕುರಿತು ಪ್ರಭಾವಿ ಬರಹಗಳನ್ನು ಬರೆಯುತ್ತಿದ್ದಾರೆ. ಇವರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಸಚಿವರು ಹಾಗೂ ಅಧಿಕಾರಿಗಳು ಶ್ಲಾಘಿಸಿದ್ದಾರೆ. ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರಿಗೆ ಇತ್ತೀಚೆಗೆ ಭಾರತ್ ಮಂಟಪದಲ್ಲಿ 2025ರ ದೇಶರತ್ನ ಪ್ರಶಸ್ತಿ ಹಾಗೂ ಭಾರತೀಯ ಕ್ಯಾಥೋಲಿಕ್ ಪತ್ರಿಕಾ ಸಂಘದಿಂದ ಜೆ ಮೌರಸ್ ಪ್ರಶಸ್ತಿ ಲಭಿಸಿದೆ. 200 ಮಾಧ್ಯಮ ಸಂಸ್ಥೆಗಳು ಪಟ್ಟಿ ಮಾಡಿದ 2025ರ ಟಾಪ್ 10 ಲೇಖಕರಲ್ಲಿ ಇವರು ಸ್ಥಾನ ಪಡೆದಿದ್ದಾರೆ. ಪರ್ಸನಾಲಿಟಿ ಆಫ್ ಇಂಡಿಯಾ ಪತ್ರಿಕೆಯು ಇವರನ್ನು ಹೊಸ ಭಾರತದ ಧ್ವನಿಯನ್ನು ರೂಪಿಸುವ ಹಾಗೂ ರಾಷ್ಟ್ರಕ್ಕಾಗಿ ಪದಗಳ ಮೂಲಕ ಉದ್ದೇಶ ಪೂರೈಸುವ ಧ್ವನಿ ಎಂದು ಬಣ್ಣಿಸಿದೆ. ಅನೇಕ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು ಶೀಘ್ರದಲ್ಲೇ ಭಾರತೀಯ ಜನತಾ ಪಕ್ಷವನ್ನು ಸೇರುವ ಆಲೋಚನೆಯಲ್ಲಿದ್ದಾರೆ.
ಮೂಡುಬಿದಿರೆ ಹೊಸಬೆಟ್ಟುವಿನ ರಿಶಲ್ ಬ್ರೆಟ್ನಿ ಫೆರ್ನಾಂಡಿಸ್ ಅವರಿಗೆ ಆಧುನಿಕ ಭಾರತದ ಯುವ ಧ್ವನಿ ಗೌರವ
ಮೂಡುಬಿದಿರೆ ಹೊಸಬೆಟ್ಟುವಿನ ರಿಶಲ್ ಬ್ರೆಟ್ನಿ ಫೆರ್ನಾಂಡಿಸ್ ಅವರಿಗೆ ಆಧುನಿಕ ಭಾರತದ ಯುವ ಧ್ವನಿ ಗೌರವ