ಮೂಡುಬಿದಿರೆ: 2025-26 ನೇ ಸಾಲಿನ ಸಿಬಿಎಸ್ಸಿ ಪರೀಕ್ಷೆಯ ಹತ್ತನೇ ತರಗತಿಯಲ್ಲಿ ರೋಟರಿ ಸೆಂಟ್ರಲ್ ಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ. ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶ್ರೀಯ ಟಿ.ಪಿ ಜೈನ್ ಶೇಕಡ ಶೇ. 94.6 ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ. ಶ್ರೀಯಾ ಎಸ್ ಶೇ.92.8 ಜೊತೆಗೆ ಸಂಸ್ಕೃತದಲ್ಲಿ 100 ಅಂಕ ಪಡೆದಿದ್ದು, ಅನ್ವಿತಾ ಪ್ರದೀಪ್ (92.80), ದಿವೀಕ್ಷ್ ಡಿ.ರೈ(89.60), ಸೀಮಾ ಬಿ( 89.40), ಕೈರಾ ಲೇಖ್ ರಾಜ್ ಶೆಟ್ಟಿ ( 88.40), ಚಾಡಲವಾಡ ರುಷಿಧರ್ ರೆಡ್ಡಿ (88), ಈಶಾನ್ವಿ ಶೆಟ್ಟಿ (87.20), ಫಾತಿಮಾ ಝುಹೈರಾ (85.80), ಮೊಹಮ್ಮದ್ ಶಿಹಾಬ್ ಶಫಿ (84.80) ಅಂಕ ಪಡೆದಿದ್ದಾರೆ. 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಉಳಿದ ಮಕ್ಕಳು ಉತ್ತಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ.ಎಂ, ಕಾರ್ಯದರ್ಶಿ ಅನಂತ ಕೃಷ್ಣರಾವ್ ಮತ್ತು ಸಂಚಾಲಕ ಜೆ.ಡಬ್ಲ್ಯೂ ಪಿಂಟೋ ಅಭಿನಂದಿಸಿದ್ದಾರೆ.
ಸಿ.ಬಿ.ಎಸ್.ಇ: ಮೂಡುಬಿದಿರೆ ರೋಟರಿ ಸೆಂಟ್ರಲ್ ಶಾಲೆಗೆ ಶೇ.100 ಫಲಿತಾಂಶ
ಸಿ.ಬಿ.ಎಸ್.ಇ: ಮೂಡುಬಿದಿರೆ ರೋಟರಿ ಸೆಂಟ್ರಲ್ ಶಾಲೆಗೆ ಶೇ.100 ಫಲಿತಾಂಶ