ಮೂಡುಬಿದಿರೆ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ತಾಲೂಕು ಅತ್ಯುತ್ತಮ ಸಾಧನೆ ಮಾಡಿ ಶೇ.99.53 ಫಲಿತಾಂಶದೊAದಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಒಟ್ಟು 1,920 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿತರಾಗಿದ್ದು, ಅವರಲ್ಲಿ 1,911 ಮಂದಿ ಉತ್ತೀರ್ಣರಾಗಿದ್ದಾರೆ. ಕೇವಲ 9 ಮಂದಿ ಅನುತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶ: ಸರ್ಕಾರಿ ಶಾಲೆಗಳು (ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ): ಒಟ್ಟು 347 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 98 ಮಂದಿ ಡಿಸ್ಟಿಂಕ್ಷನ್, 187 ಮಂದಿ ಪ್ರಥಮ ಶ್ರೇಣಿ, 38 ಮಂದಿ ದ್ವಿತೀಯ ಶ್ರೇಣಿ, 17 ಮಂದಿ ಪಾಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 7 ಮಂದಿ ಅನುತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಗಳು: ಒಟ್ಟು 384 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 69 ಮಂದಿ ಡಿಸ್ಟಿಂಕ್ಷನ್, 223 ಮಂದಿ ಪ್ರಥಮ ಶ್ರೇಣಿ, 69 ಮಂದಿ ದ್ವಿತೀಯ ಶ್ರೇಣಿ, 23 ಮಂದಿ ಪಾಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್ಲರೂ ಉತ್ತೀರ್ಣರಾಗಿದ್ದು, ಅನುತ್ತೀರ್ಣರು ಇಲ್ಲ. ಅನುದಾನ ರಹಿತ ಶಾಲೆಗಳು: ಒಟ್ಟು 1,189 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1,187 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 629 ಮಂದಿ ಡಿಸ್ಟಿಂಕ್ಷನ್, 498 ಮಂದಿ ಪ್ರಥಮ ಶ್ರೇಣಿ, 47 ಮಂದಿ ದ್ವಿತೀಯ ಶ್ರೇಣಿ, 13 ಮಂದಿ ಪಾಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2 ಮಂದಿ ಅನುತ್ತೀರ್ಣರಾಗಿದ್ದಾರೆ. ಒಟ್ಟಾರೆ 796 ಮಂದಿ ಡಿಸ್ಟಿಂಕ್ಷನ್, 908 ಮಂದಿ ಪ್ರಥಮ ಶ್ರೇಣಿ, 154 ಮಂದಿ ದ್ವಿತೀಯ ಶ್ರೇಣಿ ಹಾಗೂ 53 ಮಂದಿ ಪಾಸ್ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಟಾಪ್ ಸಾಧಕರು: ಈ ಬಾರಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪೈಕಿ ಸಚಿನ್ ಡಿ. ನಾಯಕ್( ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ) ಹಾಗೂ ಸಾಧ್ವಿ ಪಿ.ವಿ (ಅಳ್ವಾಸ್ ಆಂಗ್ಲ ಮಾಧ್ಯಮ ಶಾಲೆ) ತಲಾ 622 ಅಂಕಗಳನ್ನು ಗಳಿಸಿದ್ದಾರೆ. ಪೃಥ್ವಿರಾಜ್ ರೆಡ್ಡಿ (ಅಳ್ವಾಸ್ ಕನ್ನಡ) 621 ಅಂಕ, ನಕ್ಷತ್ರ (ಎಕ್ಸಲೆಂಟ್) 620 ಅಂಕ ಹಾಗೂ ಆದರ್ಶ್ ಆನಂದ್ ಖೋಟ್ (ಆಳ್ವಾಸ್ ಕನ್ನಡ) 620 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.