ಎಡಪದವು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿದ್ಯಾಲಯದ ಎಡಪದವು ಪ್ರೌಢಶಾಲೆಯು ಶೇ.100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆಗೈದಿದೆ. ಶಾಲೆಯ ಒಟ್ಟು 71 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 50 ಮಂದಿ ಪ್ರಥಮ ಶ್ರೇಣಿ, 5 ಮಂದಿ ದ್ವಿತೀಯ ಶ್ರೇಣಿ ಹಾಗೂ 1 ವಿದ್ಯಾರ್ಥಿ ಉತ್ತೀರ್ಣ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಲ್ಲಿ ಯಶಸ್ವಿ ಚೇತನ್ ಗೌಡ (601), ಕೀರ್ತನಾ ಶೆಟ್ಟಿ (584), ದೀಪಾಶ್ರೀ (580), ಯಕ್ಷಿತ್ ಹೆಚ್ (571), ರಕ್ಷಿತಾ (567), ಪವಿತ್ರಾ (553), ಹನುಮಂತ್ ವಾಸನದ (549), ಸಾಯಿ ಪ್ರಜ್ವಲ್ (543), ನಾಗರಾಜ ನೀಲಪ್ಪ (540), ಶ್ರೀಕಾಂತ (538), ಹರ್ಷಿತ್ ಶೆಟ್ಟಿ (533), ಶಂಕರಲಿಂಗ (532), ಯತೀನ್ ಶೆಟ್ಟಿಗಾರ್ (532), ಸೋನಾಲ್ (529) ಮೊದಲಾದವರು ಉತ್ತಮ ಸಾಧನೆ ಮಾಡಿದ್ದಾರೆ.
ಎಸ್.ಎಸ್.ಎಲ್.ಸಿ: ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಎಸ್.ಎಸ್.ಎಲ್.ಸಿ: ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಗೆ ಶೇ.100 ಫಲಿತಾಂಶ