ಮೂಡುಬಿದಿರೆ: ‘ತುಳುನಾಡ ಸಿರಿ ಮದಿಪು’ ಸ್ಪರ್ಧೆಯಲ್ಲಿ ಮೂಡುಬಿದಿರೆ ಧವಲಾ ಕಾಲೇಜು ಸತತ ಮೂರು ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಸಾಧನೆ ಮಾಡಿದೆ. ರಂಗೋಲಿ ಸ್ಪರ್ಧೆಯಲ್ಲಿ ಪ್ರತೀಕ್ಷಾ ದ್ವಿತೀಯ ಸ್ಥಾನ ಪಡೆದರೆ, ಆಶುಭಾಷಣ ಸ್ಪರ್ಧೆಯಲ್ಲಿ ಅವಿನಾಶ್ ಪ್ರಥಮ ಸ್ಥಾನ ಪಡೆದಿದ್ದಾರೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ವೀಕ್ಷಿತ ಪ್ರಥಮ ಸ್ಥಾನ ಗಳಿಸಿದ್ದು, ಉತ್ತಮ ನಿರೂಪಣೆ ವಿಭಾಗದಲ್ಲಿ ಶ್ರೇಯಾ ಪ್ರಶಸ್ತಿ ಪಡೆದಿದ್ದಾರೆ.