ಮೂಡುಬಿದಿರೆ: ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ವತಿಯಿಂದ ನಿರ್ಮಿಸಲಾದ ನೂತನ ವಸತಿಗೃಹಗಳ ಕಟ್ಟಡದ ಉದ್ಘಾಟನಾ ಸಮಾರಂಭ ಭಾನುವಾರ ಸಂಜೆ ನಡೆಯಿತು. ದುಗ್ಗಲಡ್ಕ ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕಟ್ಟಡ ಉದ್ಘಾಟಿಸಿದರು. ಮಸೀದಿ ಕಮಿಟಿ ಅಧ್ಯಕ್ಷ ಎಂ.ಎಂ.ಶರೀಫ್, ಕಾರ್ಯದರ್ಶಿ ಝಕರಿಯಾ ಯೂಸುಫ್, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಎಸ್ ಕೆ ಎಸ್ ಎಸ್ ಎಫ್ ವಾಲ್ಪಾಡಿ ಶಾಖೆ ಅಧ್ಯಕ್ಷ ಉಬೈದುಲ್ಲಾ, ಕಾರ್ಯದರ್ಶಿ ಜಮಾಲುದ್ದೀನ್ ಉಪಸ್ಥಿತರಿದ್ದರು. ವಾಲ್ಪಾಡಿ ಮಸೀದಿ ಖತೀಬ ಅಬ್ದುಲ್ ಹಮೀದ್ ದಾರಿಮಿ, ಸದರ್ ಉಸ್ಮಾನ್ ಬಾಖವಿ, ಮುಅಝ್ಝಿನ್ ಹನೀಫ್ ಮುಸ್ಲಿಯಾರ್, ಮಕ್ಕಿ ಮಸೀದಿ ಖತೀಬ ಹನೀಫ್ ದಾರಿಮಿ ಹಾಗೂ ಮುಅಝ್ಝಿನ್ ಇಸ್ಮಾಯಿಲ್ ಮುಸ್ಲಿಯಾರ್ ಪಾಲ್ಗೊಂಡಿದ್ದರು. ಮಗರಿಬ್ ನಮಾಝ್ ನಂತರ ದುಗ್ಗಲಡ್ಕ ತಂಙಳ್ ನೇತೃತ್ವದಲ್ಲಿ ನಾಲ್ಕನೇ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮ ನಡೆಯಿತು. ಮಸೀದಿ ಮಾಜಿ ಖತೀಬ ಅಬ್ಬಾಸ್ ಫೈಝಿ ದಿಡುಪೆ, ದಾರುನ್ನೂರ್ ಹುಸೈನ್ ರಹ್ಮಾನಿ, ಕಾಶಿಪಟ್ಣ ಮಸೀದಿ ಖತೀಬ ಎಸ್.ಅಬೂಬಕ್ಕರ್ ನಿಝಾಮಿ ಮತ್ತು ಮುಸ್ತಫಾ ಹನೀಫಿ ಭಾಗವಹಿಸಿದ್ದರು. ಇದೇ ವೇಳೆ ಹಜ್ ಯಾತ್ರೆಗೆ ತೆರಳಲಿರುವ ಹಸನಬ್ಬ ( ಬಾವುಞ್ಞಾಕ ) ಹಾಗೂ ಹಾಫಿಳ್ ಇಲ್ಯಾಸ್ ಮಕ್ಕಿ ಅವರನ್ನು ದುಗ್ಗಲಡ್ಕ ತಂಙಳ್ ಸನ್ಮಾನಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘಟಕರು ಎಲ್ಲರಿಗೂ ವಂದಿಸಿದರು.
ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ-ವಸತಿಗೃಹ ಉದ್ಘಾಟನೆ: ವಾರ್ಷಿಕ ಮಜ್ಲಿಸುನ್ನೂರ್
ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ-ವಸತಿಗೃಹ ಉದ್ಘಾಟನೆ: ವಾರ್ಷಿಕ ಮಜ್ಲಿಸುನ್ನೂರ್