ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಮಾರೂರು-ಪುಚ್ಚೆಮೊಗರು ನೆತ್ತೋಡಿ ಪರಿಸರದಲ್ಲಿ ಹಾದು ಹೋಗುವ ಪಲ್ಗುಣಿ ನದಿಯ ಪ್ರದೇಶದಲ್ಲಿ ಮರಳನ್ನು ತೆಗೆಯಲು ಆಕ್ಷೇಪ ಬಂದ ಹಿನ್ನಲೆಯಲ್ಲಿ ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸಾಯಂಕಾಲ ಜಂಟಿ ಸರ್ವೇ ಬಂದಿದ್ದು,ಭೂಮಾಪನ ಕಾರ್ಯದ ಸಂದರ್ಭದಲ್ಲಿ ಅಧಿಕಾರಿಗಳ ಗೈರುಹಾಜರಿಯನ್ನು ಖಂಡಿಸಿ ರೈತರು ತೀವ್ರ ಪ್ರತಿಭಟನೆ ನಡೆಸಿದರು.

ಅಳತೆ ಕಾರ್ಯದ ವೇಳೆ ಮೂಡುಬಿದಿರೆ ಮತ್ತು ಬೆಳ್ತಂಗಡಿ ತಹಶೀಲ್ದಾರ್ ಉಪಸ್ಥಿತರಿಲ್ಲದ ಕಾರಣ ಹಾಗೂ ರೈತರಿಗೆ ಯಾವುದೇ ಪೂರಕ ದಾಖಲೆಗಳನ್ನು ನೀಡದ ಕ್ರಮವನ್ನು ಪ್ರತಿಭಟನಾಕಾರರು ತೀವ್ರವಾಗಿ ಪ್ರಶ್ನಿಸಿದರು.

ರೈತರ ಸತತ ಆಕ್ರೋಶ ಮತ್ತು ಒತ್ತಾಯಕ್ಕೆ ಮಣಿದ ಭೂಮಾಪನ ಅಧಿಕಾರಿಗಳು, ಅಂತಿಮವಾಗಿ ಪ್ರಸ್ತುತ ನಡೆಯುತ್ತಿದ್ದ ಸರ್ವೆ ಕಾರ್ಯವನ್ನು ಸ್ಥಗಿತಗೊಳಿಸಿ ಜೂನ್ 6ಕ್ಕೆ ಮುಂದೂಡಿದ್ದಾರೆ. ಆ ದಿನದಂದು ಅಧಿಕಾರಿಗಳ ಸಮ್ಮುಖದಲ್ಲೇ ಸರ್ವೆ ನಡೆಸುವುದಾಗಿ ಭರವಸೆ ನೀಡಲಾಗಿದ್ದು, ಅನಿವಾರ್ಯವಾಗಿ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಲಾಗಿದೆ.

ರೈತ ಮುಖಂಡ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ದೂರುದಾರ ರೋಹನ್ ಕಾರ್ಡೋಜ, ಮುಖಂಡ ಜಾಯ್ಲಸ್ ಡಿಸೋಜ ತಾಕೋಡೆ ಮತ್ತಿತರರಿದ್ದರು.