ಮೂಡುಬಿದಿರೆ: ಬನ್ನಡ್ಕ ಬಳಿ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಬೃಹತ್ ಗಾತ್ರದ ಗೋಲಿ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಅದರ ಕೆಳಗಿದ್ದ ನಾರಾಯಣ ದೇವಾಡಿಗ ಎಂಬವರ ಗೂಡಾಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ.
ಹಗಲು ಹೊತ್ತಿನಲ್ಲಿ ಈ ಸ್ಥಳದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಮರವು ರಾತ್ರಿ ವೇಳೆ ಬಿದ್ದ ಕಾರಣ ಭಾರಿ ಸಂಭವನೀಯ ಪ್ರಾಣಾಪಾಯ ತಪ್ಪಿದಂತಾಗಿದೆ.