ಮೂಡುಬಿದಿರೆ: ವಾಲ್ಪಾಡಿ ಗ್ರಾಮದಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮನೆ ಹಾಗೂ ಕೃಷಿ ಭೂಮಿಗೆ ಹಾನಿಯಾದ ಘಟನೆ ಸಂಭವಿಸಿದೆ.
ಶೇಖರ ಪೂಜಾರಿ ಪತ್ನಿ ಸುಂದರಿ ವಾಸವಿರುವ ಮನೆಗೆ ಮರ ಬಿದ್ದ ಪರಿಣಾಮ ಸುಂದರಿ ಗಾಯಗೊಂಡಿದ್ದಾರೆ. ಇದೇ ಗ್ರಾಮದ ರಾಜು ಎಂಬುವವರ ಮನೆಗೂ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಮಳೆಯ ಆರ್ಭಟಕ್ಕೆ ಕೃಷಿ ತೋಟಗಳಿಗೂ ವ್ಯಾಪಕ ನಷ್ಟ ಉಂಟಾಗಿದೆ.