ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವ್ಯಕ್ತಿ ಮೃತಪಟ್ಟು ಮೂರ್ನಾಲ್ಕು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದ್ದು, ಶವವು ಸಂಪೂರ್ಣವಾಗಿ ಕೊಳೆತು ದುರ್ನಾಥ ಬೀರುತ್ತಿತ್ತು. ನೆರೆಮನೆಯವರೊಬ್ಬರ ನಾಯಿ ಕಾಣೆಯಾಗಿದ್ದು, ಅದೇ ನಾಯಿ ಸತ್ತು ದುರ್ನಾಥ ಬರುತ್ತಿರಬಹುದೆಂದು ಸುತ್ತಮುತ್ತ ಹುಡುಕಾಡುತ್ತಾ ಹೋದಾಗ ಈ ಮಾನವ ಶವ ಇರುವುದು ಬೆಳಕಿಗೆ ಬಂದಿದೆ. ಕೇರಳ ಮೂಲದ ಚೇಟ ಎಂಬ ವ್ಯಕ್ತಿ ಇದೇ ಪರಿಸರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಈತ ಸಂಜೆ ವೇಳೆ ಮದ್ಯಪಾನ ಮಾಡಿ ಅಲ್ಲಲ್ಲಿ ಮಲಗುತ್ತಿದ್ದ ಎನ್ನಲಾಗಿದ್ದು, ಪತ್ತೆಯಾದ ಶವ ಆತನದ್ದೇ ಇರಬಹುದು ಎಂದು ಶಂಕಿಸಲಾಗಿದೆ.