ಮೂಡುಬಿದಿರೆ: ಜೆಡಿಎಸ್ ಪಕ್ಷದ ಹಿರಿಯ ಮುತ್ಸದ್ದಿ ಮಿಜಾರ್ ಅಹ್ಮದ್ ಯಾನೇ ಪೈಲ್ವಾನ್ ಆಮದಾಕ(84) ಮಂಗಳವಾರ ಸಾಯಂಕಾಲ ನಿಧಾನರಾಗಿದ್ದಾರೆ.
ತೋಡಾರಿನ ಹಿದಾಯತ್ ನಗರದಲ್ಲಿ ನಡೆದ ಅವರ ಅಂತಿಮ ದರ್ಶನದಲ್ಲಿ ಜಾತಿ, ಧರ್ಮ ಮತ್ತು ಭೇದಭಾವವಿಲ್ಲದೆ ಅಪಾರ ಸಂಖ್ಯೆಯ ಸಾರ್ವಜನಿಕರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಎರಡರಿಂದ ಮೂರು ದಿನಗಳ ಮುಂಚಿತವಾಗಿ ಎರಡು ದಿನಪತ್ರಿಕೆಗಳನ್ನು ಪೂರ್ತಿಯಾಗಿ ಓದಿ, ಗ್ರಹಿಸುವಷ್ಟು ಬುದ್ಧಿವಂತಿಕೆ ಇವರದ್ದಾಗಿತ್ತು. ದೇವರಾಜ್ ಅರಸು ಮತ್ತು ಇಂದಿರಾ ಗಾಂಧಿ ಕಾಲದ ರಾಜಕೀಯ ವಿದ್ಯಮಾನಗಳಿಂದ ಹಿಡಿದು, ಇತ್ತೀಚಿಗಿನ ರಾಜಕೀಯ ಇತಿಹಾಸದ ಘಟನೆಯನ್ನು ಅತ್ಯಂತ ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಂಡು ವಿವರಿಸುವ ಅದ್ಭುತ ಜ್ಞಾಪಕ ಶಕ್ತಿ ಹೊಂದಿದ್ದರು.
ಜೆಡಿಎಸ್ ಪಕ್ಷದ ಅತ್ಯಂತ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು, ಪಕ್ಷದ ಪ್ರಮುಖ ಸ್ಟಾರ್ ಪ್ರಚಾರಕ ಎಂದು ಗುರುತಿಸಿಕೊಂಡಿದ್ದರು. ದೇವರಾಜ ಅರಸು,ಕೆ.ಅಮರನಾಥ ಶಟ್ಟಿ, ಮಾಜಿ ಪ್ರಧಾನಿ ದೇವೇಗೌಡರ ಕಟ್ಟಾ ಅಭಿಮಾನಿಯಾಗಿದ್ದರು.
ಮೃತರು ಪುತ್ರರಾದ ಅಬ್ದುಲ್ ಸಲೀಂ, ನಜೀರ್ ಹುಸೇನ್, ಇರುವೈಲ್ ಗ್ರಾಮ ಪಂಚಾಯತ್ ಸದಸ್ಯರಾದ ಎಂ. ಎ. ಅಶ್ರಫ್ ಹಾಗೂ ನೂರ್ ಮೊಹಮ್ಮದ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
REPORT : Arish Thodar