ಮೂಡುಬಿದಿರೆ: ತುಳು ಭಾಷಿಕರ ಮನಸ್ಸು ಗೆದ್ದಿದ್ದ, ಮೂಡುಬಿದಿರೆ ತಾಲೂಕಿನ ಮಾರ್ನಾಡು ನಿವಾಸಿ ಕಮಲ ದೊಡ್ಡ(ಅಜ್ಜಿ) ಶನಿವಾರ ನಿಧನರಾಗಿದ್ದಾರೆ. ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ನಿರೂಪಕ ಶ್ರೀನಿಥ್ ಶೆಟ್ಟಿ ಮಾರ್ನಾಡ್ ಅವರ ಅಜ್ಜಿಯಾಗಿದ್ದ ಕಮಲ ದೊಡ್ಡ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ಶ್ರೀನಿಥ್ ಶೆಟ್ಟಿ ಅವರ ವಿಡಿಯೊಗಳಲ್ಲಿ ತಮ್ಮ ಸರಳ, ಹಾಸ್ಯಭರಿತ ಮಾತುಗಳ ಮೂಲಕ ಜನರ ಗಮನ ಸೆಳೆದಿದ್ದರು. ಕಮಲ ದೊಡ್ಡ ಅವರ ಮಾತಿನ ಶೈಲಿ ಮತ್ತು ಸಹಜ ವ್ಯಕ್ತಿತ್ವವು ತುಳು ನಾಡಿನ ಜನರಲ್ಲಿ ವಿಶೇಷ ಅಭಿಮಾನವನ್ನು ಗಳಿಸಿಕೊಟ್ಟಿತ್ತು. ಅನೇಕ ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದ ಅವರು, "ತುಳುವರ ನೆಚ್ಚಿನ ಕಮಲ ದೊಡ್ಡ" ಎಂದೇ ಜನಪ್ರಿಯರಾಗಿದ್ದರು.