ಮೂಡುಬಿದಿರೆ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಚ್ಚೇರಿಕಟ್ಟೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಸುರೇಂದ್ರ ಪೂಜಾರಿ ಭಡ್ತಿ ಹೊಂದಿ ಬೆಳುವಾಯಿ ಚರ್ಚ್ ಶಾಲೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಪುರಸಭೆ ಸದಸ್ಯ ಪುರಂದರ ದೇವಾಡಿಗ, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ಆಚಾರ್ಯ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮೂಡುಬಿದಿರೆ ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಮೂಡುಬಿದಿರೆ ಘಟಕದ ಅಧ್ಯಕ್ಷೆ ನಾಗರತ್ನ ಶಿರೂರು, ಉಪಾಧ್ಯಕ್ಷ ಸುಧಾಕರ್ ಸಾಲಿಯಾನ್, ಮೋಹಿನಿ, ನಿಕಟಪೂರ್ವ ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣನಾಯಕ್, ಶಿವಪ್ರಸಾದ್, ಅಂಗನವಾಡಿ ಕಾರ್ಯಕರ್ತೆ ವಿಜಯ, ಅಡುಗೆ ಸಿಬ್ಬಂದಿ ರೇವತಿ, ರಾಜಶ್ರೀ ಉಪಸ್ಥಿತರಿದ್ದರು. ಪುರಸಭೆಯ ಮಾಜಿ ಸದಸ್ಯ ಪುರಂದರ ದೇವಾಡಿಗ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳಿಗೆ ನೋಟ್ ಪುಸ್ತಕ, ನೀರಿನ ಬಾಟಲಿ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಸುರೇಂದ್ರ ಪೂಜಾರಿ ವಿದ್ಯಾರ್ಥಿಗಳಿಗೆ ಛತ್ರಿಗಳನ್ನು ಕೊಡುಗೆಯಾಗಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಮಹೇಶ್ವರಿ ಎನ್. ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಕಾರ್ಯಕರ್ತೆ ವಿಜಯ ವಂದಿಸಿದರು.