ಮೂಡುಬಿದಿರೆ: ಇಲ್ಲಿನ ಲಯನ್ಸ್ ಕ್ಲಬ್ 50 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಜೂನ್ 25ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಕಣಂಜಾರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಸುಮಾರು ₹45 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ‘ಹರಿಭವ’ ಸಭಾಂಗಣವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ 317 ಡಿ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಲಯನ್ಸ್ ಜಿಲ್ಲೆಯ ನಿಯೋಜಿತ ರಾಜ್ಯಪಾಲ ಎಚ್.ಎಂ. ತಾರನಾಥ್, ಪ್ರಥಮ ಜಿಲ್ಲಾ ಉಪ ರಾಜ್ಯಪಾಲ ಗೋವರ್ಧನ್ ಕೆ. ಶೆಟ್ಟಿ, ದ್ವಿತೀಯ ಜಿಲ್ಲಾ ಉಪ ರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಪ್ರಾಂತೀಯ ಅಧ್ಯಕ್ಷ ಡಿ.ಕೆ. ಜಗದೀಶ್ ಚಂದ್ರ ಹಾಗೂ ವಲಯಾಧ್ಯಕ್ಷ ಜೋಸ್ಸಿ ಮೆನೇಜಸ್ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೋಸ್ಸಿ ಮೆನೇಜಸ್, ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ ಹಾಗೂ ರಿಚರ್ಡ್ ಕರ್ಡೋಜ ಉಪಸ್ಥಿತರಿದ್ದರು.