ಮೂಡುಬಿದಿರೆ: ಯುವಜನರಲ್ಲಿ ಹಣಕಾಸು ಸಾಕ್ಷರತೆಯನ್ನು ಆಟ ಮತ್ತು ಚಟುವಟಿಕೆಗಳ ಮೂಲಕ ಬೆಳೆಸುವ ಉದ್ದೇಶದಿಂದ ಪ್ರವಾಕ್ಯ ಫೌಂಡೇಶನ್ ಫನ್ ವಿತ್ ಫೈನಾನ್ಷಿಯಲ್ಸ್ ಕಾರ್ಯಕ್ರಮವನ್ನು ಆಯೋಜಿಸಿತು. ಸುಮಾರು 124 ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರವಾಕ್ಯ ಫೌಂಡೇಶನ್‌ನ ಸಂಸ್ಥಾಪಕ ಜೋಶಿತ್ ಶೆಟ್ಟಿ, ಸಹ-ಸಂಸ್ಥಾಪಕ ಶ್ರೀಕಂಠ ರಾವ್ ಮತ್ತು ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಆಟ- ಸಂವಾದದ ಮೂಲಕ ಹಣಕಾಸು ಪಾಠ: ಪಠ್ಯಪುಸ್ತಕದ ಹಣಕಾಸು ಪರಿಕಲ್ಪನೆಗಳನ್ನು ನೈಜ ಜೀವನದಲ್ಲಿ ಅಳವಡಿಸಿಕೊಳ್ಳುವ ಕ್ರಮವನ್ನು ವಿದ್ಯಾರ್ಥಿಗಳು ಆಟಗಳು, ಚಟುವಟಿಕೆಗಳು ಮತ್ತು ಸಂವಾದಾತ್ಮಕ ಕಲಿಕೆಯ ಮೂಲಕ ಅರಿತುಕೊಂಡರು. ಹಣಕಾಸು ಸಾಕ್ಷರತೆಯನ್ನು ಸರಳ ಮತ್ತು ಮನರಂಜನಾತ್ಮಕ ರೀತಿಯಲ್ಲಿ ಪರಿಚಯಿಸಿದ ಈ ವಿನೂತನ ಪ್ರಯತ್ನ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಕಾಲೇಜಿನ ಉಪ ಪ್ರಾಂಶುಪಾಲ ವೈಶಾಲಿ ಸನಿಲ್, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.