ಮೂಡುಬಿದಿರೆ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೂಡುಬಿದ್ರಿ ಪತಂಜಲಿ ಯೋಗ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಶೆಟ್ಟಿ ಬ್ರದರ್ಸ್ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ವಕೀಲ ಶಾಂತಿ ಪ್ರಸಾದ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಯೋಗದ ಮಹತ್ವ ಮತ್ತು ಆರೋಗ್ಯಕರ ಜೀವನಶೈಲಿಯಲ್ಲಿ ಅದರ ಪಾತ್ರದ ಕುರಿತು ಅವರು ಮಾತನಾಡಿದರು.

ಪತಂಜಲಿ ಯೋಗ ಸಮಿತಿಯ ಗುರು ಶರತ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆರಂಭಗೊಂಡಿತು. ಈ ಸಂದರ್ಭದಲ್ಲಿ ಕಿಶೋರ್ ಹಾಗೂ ವಿವಿಧ ಯೋಗ ಶಾಖೆಗಳ ಗುರುಗಳು ಯೋಗಾಭ್ಯಾಸ ಮತ್ತು ತರಬೇತಿಯನ್ನು ನಡೆಸಿಕೊಟ್ಟರು.

ಮೂಡುಬಿದಿರೆ ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಮುಖ ಸವಿತಾ, ಕಲ್ಲ ಮುನ್ಕೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶೇಖರ್ ಹಾಗೂ ಮಾಸ್ತಿಕಟ್ಟೆಯ ಯೋಗ ಶಿಕ್ಷಕ, ನಿವೃತ್ತ ಸೈನಿಕ ಶ್ರೀಧರ ಭಂಡಾರಿ ಅಲಂಗಾರ್ ಉಪಸ್ಥಿತರಿದ್ದರು.