ಮೂಡುಬಿದಿರೆ: ಸಾಮಾನ್ಯ ಗಾತ್ರಕ್ಕಿಂತ ಹತ್ತು ಪಟ್ಟು ಹೆಚ್ಚು ತೂಕವಿರುವ ಅಪರೂಪದ ರಾಮಫಲವೊಂದು ಅಲಂಗಾರಿನಲ್ಲಿ ಸಾರ್ವಜನಿಕರ ಗಮನಸೆಳೆಯುತ್ತಿದೆ. ಸದ್ಯ ಅಲಂಗಾರ್ ಪ್ರಶಾಂತ್ ನಾಯ್ಕ್ ಅವರ ತರಕಾರಿ ಅಂಗಡಿಯಲ್ಲಿ ಈ ಬೃಹತ್ ಹಣ್ಣನ್ನು ಮಾರಾಟಕ್ಕಿಡಲಾಗಿದ್ದು, ಹಣ್ಣಿನ ಗಾತ್ರ ಮತ್ತು ತೂಕವು ಜನರಲ್ಲಿ ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಒಂದು ರಾಮಫಲವು 300 ರಿಂದ 500 ಗ್ರಾಂ ತೂಕವಿರುತ್ತದೆ. ಮಣ್ಣಿನ ಫಲವತ್ತತೆ ಹಾಗೂ ಉತ್ತಮ ಆರೈಕೆ ಇದ್ದಲ್ಲಿ ಗರಿಷ್ಠ 1 ಕೆಜಿ ವರೆಗೆ ತೂಗುವುದು ಅಪರೂಪದ ಸಂಗತಿಯಾಗಿದೆ. ಆದರೆ, ಪ್ರಶಾಂತ್ ನಾಯ್ಕ್ ಅವರ ಅಂಗಡಿಯಲ್ಲಿರುವ ಈ ಹಣ್ಣು ಬರೋಬ್ಬರಿ 4.5 ಕೆಜಿ ತೂಕವಿದ್ದು, ಸೀತಾಫಲಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿರುವ ರಾಮಫಲವು ಇದೀಗ ನೋಡುಗರ ಕುತೂಹಲಕ್ಕೆ ಕಾರಣವಾಗಿದೆ. ಅಧಿಕ ತಿರುಳು ಹೊಂದಿರುವ ಈ ದೈತ್ಯ ಹಣ್ಣಿಗೆ 600 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಅಲಂಗಾರಿನಲ್ಲಿ ಬರೋಬ್ಬರಿ 4.5 ಕೆಜಿ ತೂಕದ ರಾಮಫಲ
Alangar Special