ಮೂಡುಬಿದಿರೆ: ಬೆಳುವಾಯಿ ಗ್ರಾಮದ ಶ್ರೀ ಕುಕ್ಕಿನಂತ್ತಾಯ, ಕೊಡಮಣಿತ್ತಾಯ, ವ್ಯಾಘ್ರಚಾಮುಂಡಿ-ಪಂಜುರ್ಲಿ ಹಾಗೂ ಬ್ರಹ್ಮಬೈದರ್ಕಳ ದೈವಸ್ಥಾನದ ಕಲ್ಲೋಳಿ ಪಾದೆ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ರಾತ್ರಿ ಅಪರೂಪದ ಗುಡ್ಜಿ ನೇಮ ನಡೆಯಿತು. ಗ್ರಾಮಸ್ಥರ ಸಹಭಾಗಿತ್ವದಲ್ಲಿ 45 ವರ್ಷಗಳ ಸುದೀರ್ಘ ಅಂತರದ ಬಳಿಕ ಈ ಧಾರ್ಮಿಕ ಕಾರ್ಯಕ್ರಮ ಸಂಘಟಿತವಾಗಿತ್ತು. ಬಾಕಿಮಾರು ಗದ್ದೆಯಲ್ಲಿ ನಿರ್ಮಿಸಲಾದ ವಿಶಾಲ ಚಪ್ಪರ ಹಾಗೂ ನಾಲ್ಕು ಕಂಬಗಳ ಒಂಬತ್ತು ಅಂತಸ್ತುಗಳ ಗುಡ್ಜಿ ಎಲ್ಲರ ಗಮನ ಸೆಳೆಯಿತು. ನೇಮೋತ್ಸವಕ್ಕಾಗಿ ದೈವಗಳ ಹೊಸ ಮಂಚ ಸೇರಿದಂತೆ ಎಲ್ಲ ಹೊಸ ಪರಿಕರಗಳನ್ನು ಬಳಸಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ಬೆಳಿಗ್ಗೆ ದೈವಗಳ ಭಂಡಾರ ಆಗಮನವಾದ ನಂತರ ಗಣಪತಿ ಹೋಮ ನೆರವೇರಿತು. ರಾತ್ರಿ ರಾಜನ್‌ದೈವಗಳಾದ ಕುಕ್ಕಿನಂತಾಯಿ, ಕೊಡಮಣಿತ್ತಾಯ ಹಾಗೂ ಬ್ರಹ್ಮಬೈದರ್ಕಳ, ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ನೇಮ ಕಾರ್ಯಗಳು ನಡೆದವು. ಗುತ್ತಿನಾರ್ ನರೇಶ್ ಶೆಟ್ಟಿ ಬರಕಳಗುತ್ತು ನೇತೃತ್ವದಲ್ಲಿ ಜರಗಿತು.
ಬೆಳುವಾಯಿಯಲ್ಲಿ ಗುಡ್ಜಿ ನೇಮ: 45 ವರ್ಷಗಳ ಬಳಿಕ ನಡೆದ ನೆಮೋತ್ಸವ
ಬೆಳುವಾಯಿಯಲ್ಲಿ ಗುಡ್ಜಿ ನೇಮ: 45 ವರ್ಷಗಳ ಬಳಿಕ ಸಾಕ್ಷಿಯಾದ ಬಾಕಿಮಾರು ಗದ್ದೆ