ಎಡಪದವು :ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ 59ನೇ ವರ್ಷದ ಭಜನಾ ಮಂಗಲೋತ್ಸವವು ನಡೆಯುತ್ತಿದೆ.
ಶನಿವಾರ ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರ ಅಭಿಷೇಕ ಹಾಗೂ ಸಮಸ್ತ ಪ್ರಧಾನ ಕಳಸ ಪೂಜೆ ನೆರವೇರಿತು. ನಂತರ l ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ ಮತ್ತು ಮಹಾಪೂಜೆ, ಅನ್ನದಾನನಡೆಯಿತು. ಮಧ್ಯಾಹ್ನ ಪಲ್ಲಪೂಜೆ ನಡೆಯಲಿದ್ದು, ಸಂಜೆಯಿಂದ ಏಪ್ರಿಲ್ 12ರ ಭಾನುವಾರ ಬೆಳಗಿನ ಜಾವದವರೆಗೆ ನಿರಂತರ ಭಜನಾ ಕಾರ್ಯಕ್ರಮಗಳು ಜರುಗಲಿವೆ. ಈ ಭಜನಾ ಮಂಗಲೋತ್ಸವದಲ್ಲಿ ಸತ್ಯನಾರಾಯಣ ಮಕ್ಕಳ ಕುಣಿತ ಭಜನಾ ಮಂಡಳಿ ಮೂಡುಬಿದಿರೆ, ಕಾಜಿಟ್ಟು ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ ಬಡಗ ಎಡಪದವು, ಕಾಳಭೈರವ ಮಂಜುನಾಥೇಶ್ವರ ಭಜನಾ ಮಂಡಳಿ ಮಳಲಿ ಮಟ್ಟಿ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬೈತರಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಜ್ಯೋತಿಗುಡ್ಡೆ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಳಲಿ, ಶ್ರೀ ಚೆನ್ನಕೇಶವ ಭಜನಾ ಮಂಡಳಿ ಕಳವಾರು, ಶ್ರೀರಾಮ ಭಜನಾ ಮಂದಿರ ಎಡಪದವು, ಬ್ರಹ್ಮಶ್ರೀ ನಾರಾಯಣ ಗುರುಮಂದಿರ ತೆಂಕ ಎಡಪದವು, ಶ್ರೀ ಅಂಬಾಭವಾನಿ ಭಜನಾ ಮಂಡಳ, ಶ್ರೀ ಹರಿ ಭಜನಾ ಮಂಡಳಿ ಕೋಡಾರು ಹಾಗೂ ಶ್ರೀ ಭೂತನಾಥೇಶ್ವರ ಭಜನಾ ಮಂಡಳಿ ಶಾಸ್ತಾವು ಭಾಗವಹಿಸಿವೆ.