ಮೂಡುಬಿದಿರೆ: ದಕ್ಷಿಣ ಕರ್ನಾಟಕದ ಸುಪ್ರಸಿದ್ಧ ಚಿನ್ನಾಭರಣ ಸಂಸ್ಥೆ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ತನ್ನ ನೂತನ ಮಳಿಗೆಯನ್ನು ಮೂಡುಬಿದಿರೆಯ ಬಸ್‌ಸ್ಟ್ಯಾಂಡ್ ಬಳಿಯಿರುವ ನವಮಿ ಪ್ಲಾಜಾದಲ್ಲಿ ಏಪ್ರಿಲ್ 12ರಂದು ಲೋಕಾರ್ಪಣೆಗೊಳಿಸುತ್ತಿದೆ.
ಈ ನೂತನ ಮಳಿಗೆಯ ಉದ್ಘಾಟನೆ ಅಂಗವಾಗಿ ಏಪ್ರಿಲ್ 12ರಿಂದ 20ರವರೆಗೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಲಾಗಿದೆ. 10 ಗ್ರಾಂ ಚಿನ್ನಾಭರಣಗಳ ಮೇಲೆ 5 ಸಾವಿರ ರೂಪಾಯಿ ರಿಯಾಯಿತಿ, ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿ.ಗೆ 6 ಸಾವಿರ ರೂಪಾಯಿ ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ 7 ಸಾವಿರ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ.
ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಉಮಾನಾಠ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಆಳ್ವಾಸ್ ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ.ಎಂ.ಮೋಹನ ಆಳ್ವ, ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್‌ಪೋರ್ಟ್ಸ್‌ನ ಶ್ರೀಪತಿ ಭಟ್, ಬಾರಾಡಿ ಅರಮನೆಯ ಕುಲದೀಪ ಎಂ., ನವಮಿ ಗ್ರೂಪ್‌ನ ಆಡಳಿತ ನಿರ್ದೇಶಕ ನಂದಕುಮಾರ್ ಕುಡ್ವ ಭಾಗವಹಿಸಲಿದ್ದಾರೆ. ಸಂಸ್ಥೆಯ ಚೇರ್ಮನ್ ಜಿ.ಎಲ್.ಬಲರಾಮ ಆಚಾರ್ಯ, ನಿರ್ದೇಶಕರಾದ ಲಕ್ಷ್ಮೀಕಾಂತ ಬಿ.ಆಚಾರ್ಯ ಮತ್ತು ಸುಧನ್ವ ಬಿ.ಆಚಾರ್ಯ ಅತಿಥಿಗಳನ್ನು ವಂದಿಸಿದರು. ಮಳಿಗೆಯಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸದ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ವೈವಿಧ್ಯಮಯ ಸಂಗ್ರಹಗಳಿದ್ದು, ಎಲ್ಲ ವರ್ಗದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಭರಣಗಳು ಲಭ್ಯವಿವೆ. ವಿಶಾಲವಾದ ಪ್ರದರ್ಶನ ವ್ಯವಸ್ಥೆ ಹಾಗೂ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಮಳಿಗೆ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ