ಮೂಡುಬಿದಿರೆ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಆಚಾರ್ಯ ಬೇಲಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಪತಿ ಆಚಾರ್ಯ ಆಯ್ಕೆ
ಮೂಡುಬಿದಿರೆ: ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಕ್ಷೇತ್ರದ ಆಡಳಿತ ಮುಕ್ತೇಸರರಾದ ಎಂ. ಕೆ ಬಾಲಕೃಷ್ಣ ಆಚಾರ್ಯ ಉಳಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಜಗದೀಶ್ ಆಚಾರ್ಯ ಬೇಲಾಡಿ, ಉಪಾಧ್ಯಕ್ಷರಾಗಿ ಭಾಸ್ಕರ್ ಆಚಾರ್ಯ ಹೊಸಬೆಟ್ಟು, ಕೋಶಾಧಿಕಾರಿಯಾಗಿ ಸರ್ವೋತ್ತಮ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಪತಿ ಆಚಾರ್ಯ ಜ್ಯೋತಿನಗರ,ಜೊತೆ ಕಾರ್ಯದರ್ಶಿಯಾಗಿ ಚೇತನ್ ಆಚಾರ್ಯ ಆಯ್ಕೆಯಾದರು. ಕ್ರೀಡಾ ಕಾರ್ಯದರ್ಶಿಗಳಾಗಿ ವಿಕ್ರಮ್ ಆಚಾರ್ಯ ಶಿರ್ತಾಡಿ ಮತ್ತು ಸಂಜಯ್ ಆಚಾರ್ಯ ಕೊಯ್ಯುರು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಧಾಕರ್ ಆಚಾರ್ಯ ಹೊಸಬೆಟ್ಟು ಮತ್ತು ಹರೀಶ್ ಪುರೋಹಿತರು ಸಾಣೂರು ಆಯ್ಕೆಯಾದರು. ಸಮಿತಿಯ ಸದಸ್ಯರುಗಳಾಗಿ ಶಿವಾನಂದ ಆಚಾರ್ಯ ಉಳಿಯ ಸುಧಾಕರ್ ಆಚಾರ್ಯ ಮಾರ್ನಾಡು ನವೀನ್ ಆಚಾರ್ಯ ಪಾಲಡ್ಕ ಶುಭಕರ ಆಚಾರ್ಯ ಬೆಳುವಾಯಿ ಪುರಂದರ ಪುರೋಹಿತರು ಮುನಿಯಾಲು ಸತೀಶ್ ಆಚಾರ್ಯ ಮುಂರಾಡಿ ಸುದರ್ಶನ ಆಚಾರ್ಯ ಪಡುಮರ್ನಾಡ್, ಶಿವರಾಮ ಆಚಾರ್ಯ ಶ್ರೀ ಕಾಳಿಕಾಂಬನಗರ ಆಯ್ಕೆಯಾದರು. ಸಭೆಯ ಮುಖ್ಯ ಅತಿಥಿಯಾಗಿ ಕಾರ್ಕಳ ಪೆರ್ವಾಜೆಯ ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಅಧ್ಯಕ್ಷ ಬಿ.ಪ್ರಕಾಶ್ ಆಚಾರ್ಯ ಆಗಮಿಸಿ ಶುಭ ಹಾರೈಸಿದರು ಕ್ಷೇತ್ರದ 2ನೇ ಮೊಕ್ತೇಸರ ಶಿವರಾಮ್ ಆಚಾರ್ಯ ಉಳಿಯ ಕಾರ್ಯಕಾರಿ ಸಮಿತಿಯ ರಚನಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಪ್ರಧಾನ ಕಾರ್ಯದರ್ಶಿ ಸುಧಾಕರ್ ಆಚಾರ್ಯ ಹೊಸಬೆಟ್ಟು ವರದಿ ವಾಚಿಸಿದರು. ಕೋಶಾಧಿಕಾರಿ ಸುರೇಶ ಗಂಟಲ್ಕಟ್ಟೆ ಲೆಕ್ಕಪತ್ರ ಮಂಡಿಸಿದರ. ಶ್ರೀಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು