*ಮೂಡುಬಿದಿರೆ: ನಗರದಲ್ಲಿ ಪ್ರಪ್ರಥಮ ಬಾರಿಗೆ ಮಲ್ಹಾರ್ ಎಕ್ಸಿಬಿಷನ್ಸ್ ವತಿಯಿಂದ ಸೀರೆ, ಒನ್ ಗ್ರಾಮ್ ಗೋಲ್ಡ್ ಜ್ಯುವೆಲ್ಲರಿ ಹಾಗೂ ಸಲ್ವಾರ್ ಸೆಟ್‌ಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಈ ವಿಶೇಷ ಮೇಳವನ್ನು ಮೂಡುಬಿದಿರೆಯ ವಕೀಲೆ ಶ್ವೇತಾ ಜೈನ್, ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್.ಹೆಗ್ಡೆ ಶ್ವೇತಾ ಕೆ, ಶೋಭಾ ಹೆಗ್ಡೆ, ಶೋಭಾ ಸೆಕ್ವೇರಾ, ದಿವ್ಯಾ ಹೇಮಾ, ವೃಂದಾ ಶಶಿಧರ್ ಹೆಗ್ಡೆ, ವಿಶಾಲಿ ವರದರಾಜ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೇಳಕ್ಕೆ ಚಾಲನೆ ನೀಡಿದರು.

ಶ್ವೇತಾ ಜೈನ್ ಮಾತನಾಡಿ, ಈ ಪ್ರದರ್ಶನದಲ್ಲಿ ಅತ್ಯುತ್ತಮ ವಿನ್ಯಾಸದ ಸೀರೆಗಳು, ಕುರ್ತಾ ಸೆಟ್‌ಗಳು ಹಾಗೂ ಆಕರ್ಷಕ ಆಭರಣಗಳ ಸಂಗ್ರಹವಿದ್ದು, ಗ್ರಾಹಕರಿಗೆ ಆಯ್ಕೆ ಮಾಡಲು ಉತ್ತಮ ಅವಕಾಶವಿದೆ. ಮಲ್ಹಾರ್ ಎಕ್ಸಿಬಿಷನ್ಸ್‌ನ ವೈಶಾಲಿ ಶೆಟ್ಟಿ ಹಾಗೂ ವಿಶಾಲ ಶೆಟ್ಟಿ ಈ ಮೇಳವನ್ನು ಉತ್ತಮವಾಗಿ ಆಯೋಜಿಸಿದ್ದಾರೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಇದರ ಪ್ರಯೋಜನ ಪಡೆಯಬೇಕು ಹಬ್ಬ ಹಾಗೂ ವಿಶೇಷ ಸಮಾರಂಭಗಳಿಗೆ ಬೇಕಾದ ಎಲ್ಲಾ ತರಹದ ಉಡುಪುಗಳು ಒಂದೇ ಸೂರಿನಡಿ ಲಭ್ಯವಿರುವುದು ಈ ಪ್ರದರ್ಶನದ ವಿಶೇಷತೆಯಾಗಿದೆ ಎಂದರು.

ಮಲ್ಹಾರ್ ಎಕ್ಸಿಬಿಟರ್ಸ್ ಅಂಡ್ ಇವೆಂಟ್ ಪ್ರಮೋಟರ್ಸ್‌ನ ವೀಣಾ ಜೀವನ ಶೆಟ್ಟಿ ಮತ್ತು ವೈಶಾಲಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.