ಮೂಡುಬಿದಿರೆ: ತಾಲೂಕಿನಲ್ಲಿ ಬುಧವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಗಾಳಿ ಸಹ ಜೋರಾಗಿ ಬೀಸಿದೆ. ಮಾರೂರು ಪ್ರದೇಶದಲ್ಲಿ ಗಾಳಿ ಸಹಿತ ಗುಡುಗು ಮಳೆಯಾಗಿದೆ. ಗ್ರಾಮದ ಮನೆಯೊಂದರ ಎರಡು ಫ್ಯಾನ್‌ಗಳು ಹಾಳಾಗಿವೆ. ಅಲ್ಲದೆ, ಸ್ಥಳೀಯ ಬೀದಿ ದೀಪಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ವ್ಯವಸ್ಥೆ ಹದಗೆಟ್ಟಿದೆ. ತಾಂತ್ರಿಕ ದೋಷದಿಂದಾಗಿ ಮಾರೂರು ಪ್ರದೇಶದಲ್ಲಿ ಕೆಲವು ಗಂಟೆಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.