ಮೂಡುಬಿದಿರೆ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಬಳಸಲಾಗುವ ಚೆಂಡನ್ನು ಕ್ಷೇತ್ರದ ಪ್ರತಿನಿಧಿಗಳಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ, ಚೆಂಡನ್ನು ತಯಾರಿಸಿರುವ ಗಾಂಧಿನಗರ ನಿವಾಸಿ ಪದ್ಮನಾಭ ಅವರ ಮನೆಯಂಗಳದಲ್ಲಿ ಸೋಮವಾರ ನಡೆಯಿತು. ಪದ್ಮನಾಭ ಅವರು 27 ವರ್ಷಗಳಿಂದಲೂ ಕ್ಷೇತ್ರದ ಜಾತ್ರೆಗೆ ಚೆಂಡು ತಯಾರಿಸಿ ಕೊಡುತ್ತಿದ್ದು, ಈ ಚೆಂಡನ್ನು ಸೋಮವಾರ ಬೆಳಗ್ಗೆ ಪದ್ಮನಾಭರ ಮನೆಯಂಗಳದಲ್ಲಿರುವ ಶ್ರೀ ಮಹಮ್ಮಾಯಿ ದೇವಿಯ ಸನ್ನಿಧಿಯಲ್ಲಿ ಪೂಜಿಸಿ, ಪ್ರಾರ್ಥಿಸಿ, ಪೊಳಲಿ ಕ್ಷೇತ್ರದ ಪರವಾಗಿ ಬಂದ ಕಡಪುಕರಿಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪೊಳಲಿ ತಂಡದಲ್ಲಿ ಕೃಷ್ಣಪ್ಪ ಕಲ್ಕುಡ, ಉಮೇಶ, ಪ್ರಸಾದ್ ಗಾಣಿಗ ನರಿಕೊಂಬು, ಪ್ರಕಾಶ್ ಕಲ್ಕುಡ, ಸತೀಶ್ ಹರೇಕಳ, ಲೋಕಯ್ಯ ಸಪಳಿಗ, ಗಂಗಾಧರ, ಗೋಪಾಲ , ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಉಪಸ್ಥಿತಿದ್ದರು. ಪೊಳಲಿ ಕ್ಷೇತ್ರದ ಪ್ರಸಾದವನ್ನು ಪದ್ಮನಾಭ ಅವರ ತಾಯಿ ಲಿಂಗಮ್ಮ ಅವರು ಸ್ವೀಕರಿಸಿದರು. ಪದ್ಮನಾಭ ಅವರೊಂದಿಗೆ ಚಂದ್ರಶೇಖರ, ರವಿಚಂದ್ರ, ವಿಶ್ವನಾಥ ದೇವಾಡಿಗ, ರವಿಚಂದ್ರ , ಶಿವಾನಂದ, ಲಕ್ಷ್ಮೀ ನಾರಾಯಣ, ಚುವ್ವ ಉಪಸ್ಥಿತರಿದ್ದು ಚೆಂಡನ್ನು ಪೊಳಲಿಯವರಿಗೆ ಹಸ್ತಾಂತರಿಸಿದರು.