ಮೂಡುಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದ ಸಮೀಪದ ನಿವಾಸಿ, ಶಾರದಾ ಉಪೇಂದ್ರ ಆಚಾರ್ಯ (90) ಏ.14ರಂದು ನಿಧನರಾಗಿದ್ದಾರೆ.
ಸ್ವರ್ಣಕಾರರು ನಿರ್ಮಿಸಿದ ಚಿನ್ನಾಭರಣಗಳಿಗೆ ಅಂತಿಮ ಹಂತದಲ್ಲಿ ಕಡ್ಡಿ ಒಪ್ಪ ಹಾಕುವ (ಫಿನಿಶಿಂಗ್ ನೀಡುವ) ವಿಶಿಷ್ಟ ಕಲೆಯಲ್ಲಿ ಅವರು ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ತಮ್ಮ ದೀರ್ಘಕಾಲದ ವೃತ್ತಿ ಬದುಕಿನಲ್ಲಿ ಆಭರಣಗಳಿಗೆ ಕಲಾತ್ಮಕ ಮೆರುಗು ನೀಡುವ ಮೂಲಕ ಗುರುತಿಸಿಕೊಂಡಿದ್ದರು.