ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಹಾಗೂ ಮೂಡುಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಚಾಂಪಿಯನ್‌ಶಿಪ್-2026 ಏಪ್ರಿಲ್ 11ರ ಶನಿವಾರದಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಎಸ್ ಸತೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಪರಾಹ್ನ 3:30ಕ್ಕೆ ಮಹಿಳೆಯರ ಪಂದ್ಯಾಟವನ್ನು ವಕೀಲರಾದ ಶ್ವೇತಾ ಜೈನ್ ಉದ್ಘಾಟಿಸಲಿದ್ದಾರೆ. ಮೂಡುಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್ ಕ್ರೀಡೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚ್ಚೇರಿಪೇಟೆಯ ಸಂದೀಪ್ ಶೆಟ್ಟಿ ಹಾಗೂ ಮಾಡರ್ನ್ ಡೆವೆಲಪರ್ಸ್‌ನ ಇಂಜಿನಿಯರ್ ಜಾವೆದ್ ಶೇಕ್ ಭಾಗವಹಿಸಲಿದ್ದಾರೆ. ಸಂಜೆ 7:30ಕ್ಕೆ ಪುರುಷರ ವಿಭಾಗದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಉಮಾನಾಥ ಎ. ಕೋಟ್ಯಾನ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಂಕಣವನ್ನು ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಬಿ. ಎಸ್ ಸತೀಶ್ ಕುಮಾರ್, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ಕೆ. ಪಿ. ಸುಚರಿತ ಶೆಟ್ಟಿ, ಗೌರವ ಸಲಹೆಗಾರ ಜಯಪ್ರಕಾಶ್ ರೈ, ಹೋಟೆಲ್ ರಂಗೋಲಿಯ ಮಾಲಕ ಚಂದ್ರಹಾಸ ಶೆಟ್ಟಿ ಹಾಗೂ ಮಾಜಿ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಸುನೀಲ್ ಬಾಳಿಗ ಉಪಸ್ಥಿತರಿರುವರು. ಸಮಾರೋಪ ಸಮಾರಂಭದಲ್ಲಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ವಿನಯ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ಬಿ. ಎಸ್ ಸತೀಶ್ ಕುಮಾರ್ ಬಹುಮಾನ ವಿತರಿಸುವರು. ಜಿಲ್ಲಾ ಕಾರ್ಯದರ್ಶಿ ಶಂಕರ್ ಶೆಟ್ಟಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಮಾತನಾಡಿದ ಬಿ. ಎಸ್ ಸತೀಶ್ ಕುಮಾರ್, ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ಮೂಡುಬಿದಿರೆಯಲ್ಲಿ ಇಂಡೋರ್ ಸ್ಟೇಡಿಯಂ ನಿರ್ಮಾಣದ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಜಿಲ್ಲಾ ಗೌರವಾಧ್ಯಕ್ಷ ಎ. ಸುರೇಶ್ ಬಾಬು, ಜಿಲ್ಲಾ ಕಾರ್ಯದರ್ಶಿ ಶಂಕರ ಶೆಟ್ಟಿ ಪರಾರಿಗುತ್ತು, ಕೋಶಾಧಿಕಾರಿ ಇಬ್ರಾಹಿಂ ಗೂನಡ್ಕ, ಉಪಾಧ್ಯಕ್ಷ ಸಂಶುದ್ದೀನ್ ಸುಳ್ಯ, ಲಿಲ್ಲಿ ಪಾಯ್ಸ್, ಸಂಘಟನಾ ಕಾರ್ಯದರ್ಶಿ ಅಹಮ್ಮದ್ ಮುಸ್ತಾಫ, ಸಹ ಕಾರ್ಯದರ್ಶಿ ಹೈದರ್ ಕೈರಂಗಳ, ತಾಲೂಕು ಅಧ್ಯಕ್ಷ ಡಾ. ವಿನಯ ಆಳ್ವ, ಕಾರ್ಯದರ್ಶಿ ಎಸ್. ನಾಗೇಶ ಹಾಗೂ ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಸೇರಿದಂತೆ ಉಭಯ ಸಂಘಟನೆಗಳ ಸದಸ್ಯರು ಆಗಮಿಸುವರು ಎಂದು ಸತೀಶ್ ಕುಮಾರ್ ಮಾಹಿತಿ ನೀಡಿದರು.