ಕಾರ್ಕಳ: ರಾಷ್ಟ್ರೀಯ ರಕ್ಷಣಾ ಪಡೆ ಸೇರಬಯಸುವವರಿಗಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಎನ್‌ಡಿಎ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಶ್ಚಿತ್ ಗಿರೀಶ್ ಗೌಡ, ಸುನಿಲ್ ಅಮಿತ್ ಗೋಕಾಕ, ಅಭಿಷೇಕ್ ಮೂಕಿ ಮತ್ತು ನಾಗದೇವ ಎಂ.ಟಿ. ತೇರ್ಗಡೆಗೊಂಡು ಮುಂದಿನ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ ಹಾಗೂ ಪರೀಕ್ಷಾ ಸಂಯೋಜಕ ಸುಮಂತ್ ರಾವ್ ಅಭಿನಂದಿಸಿದ್ದಾರೆ.