ಮೂಡುಬಿದಿರೆ: ಇಲ್ಲಿನ ಮಿಜಾರು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಮಿಜಾರು ತನ್ನ 73ನೇ ಮಾಸಿಕ ಶೈಕ್ಷಣಿಕ ಸೇವಾ ಯೋಜನೆಯನ್ನು ಪೂರೈಸಿದೆ.

ತಿಂಗಳ ಯೋಜನೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ತಿಪ್ಲಾಬೆಟ್ಟು ಬಡಗ ಎಡಪದವು ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಬಡಗ ಎಡಪದವು ಪಂಚಾಯತ್ ಉಪಾಧ್ಯಕ್ಷ ಚಂದ್ರಹಾಸ್ ಉರ್ಕಿ, ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ನವೀನ್ ಪಿ ಮಿಜಾರ್, ಸೇವಾ ಮಾಣಿಕ್ಯ ಅಕ್ಷಯ್ ದೋಡ್ಲಾ, ಮುಖ್ಯ ಶಿಕ್ಷಕಿ ವೀಣಾ ರೆಗೊ, ಶಿಕ್ಷಕರು ಉಪಸ್ಥಿತರಿದ್ದರು.