ಮೂಡುಬಿದಿರೆ: ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯಲ್ಲಿ ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಜಂಟಿ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಶಾಲಾ ಸಂಚಾಲಕ ಜಯಪ್ರಕಾಶ್ ಪಡಿವಾಳ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ದಾನಿಗಳಾದ ಹಳೇ ವಿದ್ಯಾರ್ಥಿ 50 ಸಾವಿರ ರೂಪಾಯಿ ಮೌಲ್ಯದ ವೈಟ್ ಬೋರ್ಡ್ ಮತ್ತು ಸುಮಾರು 70ವಿದ್ಯಾರ್ಥಿಗಳಿಗೆ ಉಚಿತ ಸ್ಯಾಂಡಲ್ ಒದಗಿಸಿದ್ದಾರೆ.ದಿವಾಕರ್ ಸುವರ್ಣ 35 ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಹಾಗೂ 20 ಜೋಡಿ ಚಪ್ಪಲಿಗಳನ್ನು ಕೊಡುಗೆಯಾಗಿ ನೀಡಿದರು. ಸುಕುಮಾರ್ ಅಮೀನ್ 25 ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರ ವಿತರಿಸಿದರು. ಮೂಡುಬಿದಿರೆ ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವಾ ಬ್ಯಾಂಡ್ ಸೆಟ್ ಹಾಗೂ ಸ್ಕೂಲ್ ಬ್ಯಾಗ್ ವಿತರಿಸಿದರೆ, ಕಲ್ಲಮುಂಡ್ಕೂರು ನಿದ್ದೋಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಪಿಂಟೋ ಛತ್ರಿಗಳನ್ನು ವಿತರಿಸಿದರು. ಶಿವಾನಂದ ಸುವರ್ಣ ಸಮವಸ್ತ್ರ ಹಾಗೂ ರೆನ್ವಿಡಾ ಸ್ಕೂಲ್ ಐಡಿ ಕಾರ್ಡ್‌ಗಳನ್ನು ವಿತರಿಸಿದರು.
ಶ್ರುತಿ ಚಂದ್ರಕಾಂತ್ ಭಟ್ ಡಿಜಿಟಲ್ ಬೋರ್ಡ್ ಮತ್ತು ಸ್ಯಾಂಡಲ್ ವಿತರಿಸಿದರು. ಸುಧಾಕರ್ ಸುವರ್ಣ ಮತ್ತು ಸಹೋದರರು ನೋಟ್ ಪುಸ್ತಕಗಳನ್ನು ಹಸ್ತಾಂತರಿಸಿದರು.
ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ವರದರಾಯ ಕಾಮತ್, ಕೃಷ್ಣ ಶೆಟ್ಟಿ, ಪ್ರಮುಖರಾದ ನರಸಿಂಹ ಮಡಿವಾಳ, ನಿಡ್ಡೋಡಿ ಸಂದೀಪ್ ಸುವರ್ಣ, ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸಂಸ್ಥೆಯ ಸುನಿಲ್ ಮೆಂಡೋನ್ಸಾ, ಡಯಾನ ಶರವೋ, ರಾಕಿ ಮಸ್ಕರನೆಸ್, ರಿಚರ್ಡ್ ಡಿಸೋಜ, ಸೂರ್ಯಕಾಂತ ಭಟ್, ಪ್ರಕಾಶ್ ಮಿರಂದ, ಸಂಜೀವ ಹಾಗೂ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.