ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಪಡೆದು ಐಐಟಿ ಪ್ರವೇಶಕ್ಕೆ ಅರ್ಹರಾಗಿದ್ದಾರೆ.
ವಿದ್ಯಾರ್ಥಿ ಧನುಷ್ ಗುತ್ತಿ ಅಖಿಲ ಭಾರತ ಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 95ನೇ ರ‍್ಯಾಂಕ್ ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ. ಆದಿತ್ಯ ಅನಿಲ್ ಕೆಂಚಣ್ಣನವರ್ 1803 ರ‍್ಯಾಂಕ್, ಪ್ರಕೃತಿ ಶ್ರೀಧರ್ ಕೆಟಗರಿ ವಿಭಾಗದಲ್ಲಿ 1814 ರ‍್ಯಾಂಕ್, ಗೌತಮ್ ಎ.ಎನ್ ಕೆಟಗರಿ ವಿಭಾಗದಲ್ಲಿ 3125 ರ‍್ಯಾಂಕ್, ಸಮ್ಮಿತ್ ಎಚ್.ಎಸ್ 4372 ರ‍್ಯಾಂಕ್ ಹಾಗೂ ಜೆಂಕರ್ ಎಂ 22318 ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ದೇಶದ ಅತ್ಯಂತ ಕಠಿಣ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್‌ನಲ್ಲಿ ವಿದ್ಯಾರ್ಥಿಗಳು ದಾಖಲಿಸಿದ ಈ ಪ್ರಶಂಸನೀಯ ಸಾಧನೆಯು ಅವರ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ, ಪೋಷಕರ ಪ್ರೋತ್ಸಾಹ ಹಾಗೂ ಕಾಲೇಜಿನ ಗುಣಮಟ್ಟದ ಬೋಧನೆ ಮತ್ತು ತರಬೇತಿಯ ಪ್ರತಿಫಲವಾಗಿದೆ ಎಂದು ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.