ಮೂಡುಬಿದಿರೆ: ಪಡುಮಾರ್ನಾಡು ಮಹಾವೀರ ಹಿರಿಯ ಪ್ರಾಥಮಿಕ ಶಾಲೆ ಅಮಾನಬೆಟ್ಟು ಇಲ್ಲಿನ ಒಂದರಿಂದ ಏಳನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ತೊಡಾರಿನ ನವಚೇತನ ಸೇವಾ ಬಳಗ ವತಿಯಿಂದ ಸುಮಾರು 15,000 ರೂಪಾಯಿ ವೆಚ್ಚದ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಶಾಲಾ ಟ್ರಸ್ಟಿ, ಭೂ ನ್ಯಾಯ ಮಂಡಳಿ ಸದಸ್ಯ ರಮೇಶ್ ಎಸ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 2026-27ರ ಶೈಕ್ಷಣಿಕ ವರ್ಷದಲ್ಲಿ ಶಾಲೆಯು ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.
ಪಡುಮಾರ್ನಾಡು ಯುವಕ ಮಂಡಲದ ಅಧ್ಯಕ್ಷ ಭರತ್ ಕೆ ಶೆಟ್ಟಿ, ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಜಯ ಬಿ., ಶಾಲಾ ಹಿತೈಷಿ ಸಂಧ್ಯಾ ವಿ. ಹೆಗ್ಡೆ,ನವಚೇತನ ಸೇವಾ ಬಳಗದ ಗೌರವಾಧ್ಯಕ್ಷ ದಯಾನಂದ ಶೆಟ್ಟಿ, ಅಧ್ಯಕ್ಷ ದಾಮೋದರ ಮಿಜಾರ್, ಸದಸ್ಯರಾದ ಕಿರಣ್, ದಿನಕರ ಮಾರ್ನಾಡ್, ಪೂರ್ಣಿಮಾ, ಸುನೀಲ್ ಅಂಚನ್, ಮಂಜುನಾಥ ಬೈಪಾಸ್, ದಿನಕರ ಪೂಜಾರಿ ಮಿಜಾರ್, ವಿಜಯ ದರಗುಡ್ಡೆ ಹಾಗೂ ದೇವಿಕಾ ಪ್ರಸಾದ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಹೇಮಾವತಿ ಸ್ವಾಗತಿಸಿದರು. ಸಹಶಿಕ್ಷಕಿ ಸುನೀತಾ ವಂದಿಸಿದರು.