*ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷದ ವಿಶ್ವವಿದ್ಯಾನಿಲಯ ಮಟ್ಟದ ಅಂತಿಮ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು. ಪದವಿ ವಿಭಾಗದಲ್ಲಿ 3 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 9 ರ‍್ಯಾಂಕ್‌ಗಳೊAದಿಗೆ ಒಟ್ಟು 12 ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.

ರೋಡ್ರಿಗಸ್ ಪ್ರಣೀಲ್ ಮೆಲ್ವಿನ್ ಪ್ರಥಮ ರ‍್ಯಾಂಕ್ ಪಡೆದು ವಿಶ್ವವಿದ್ಯಾನಿಲಯ ಟಾಪರ್ ಆಗಿ ಹೊರಹೊಮ್ಮಿದ್ದು, ಪ್ರತಿಷ್ಠಿತ ಸೀತಾರಾಮ ಜಿಂದಾಲ್ ಗೋಲ್ಡ್ ಮೆಡಲ್‌ಗೆ ಭಾಜನರಾಗಿದ್ದಾರೆ. ಜೊತೆಗೆ ಅಕ್ಷತಾ ಪಿ. 7ನೇ ರ‍್ಯಾಂಕ್ ಮತ್ತು ದೀಕ್ಷಾ ಬಿ 10ನೇ ರ‍್ಯಾಂಕ್‌ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಸ್ನಾತಕೋತ್ತರ ವಿಭಾಗದ ಎಂ.ಡಿ. ಇನ್ ಕ್ಲಿನಿಕಲ್ ನ್ಯಾಚುರೋಪಥಿಯಲ್ಲಿ ಡಾ. ಶಾಲಿನಿ ಪಿ.ವೈ ಪ್ರಥಮ ರ‍್ಯಾಂಕ್ ಪಡೆದಿದ್ದು, ಡಾ. ಗ್ರೀಷ್ಮಾ ವಿವೇಕ್ ಆಳ್ವ ದ್ವಿತೀಯ ರ‍್ಯಾಂಕ್ ಹಾಗೂ ಡಾ. ಶ್ರದ್ಧಾ ಎಂ.ಕೆ 9ನೇ ರ‍್ಯಾಂಕ್ ಗಳಿಸಿದ್ದಾರೆ. ಎಂ.ಡಿ ಇನ್ ಕ್ಲಿನಿಕಲ್ ಯೋಗ ವಿಭಾಗದಲ್ಲಿ ಡಾ. ವಿನಯ್ ಕುಮಾರ್ ಟಿ ದ್ವಿತೀಯ ರ‍್ಯಾಂಕ್ ಪಡೆದಿದ್ದು, ಡಾ.ಭೂಮಿಕಾ ಬಿ.ಆರ್ 5ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ. ಹೋಬಿಜಾಮ್ ಕೇಕೆಸಾನಾ ದೇವಿ ಮತ್ತು ಡಾ.ಮಾರ್ಗರೆಟ್ ಸಲಾಂ ತಲಾ 6ನೇ ರ‍್ಯಾಂಕ್ ಗಳಿಸಿದ್ದು, ಡಾ.ಕಂಚನ್ ಮೈಬಾಮ್ 8ನೇ ರ‍್ಯಾಂಕ್ ಹಾಗೂ ಡಾ. ಕೃಷ್ಣೇಂದು ಪಿ.ವಿನಯ್ 10ನೇ ರ‍್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ ಅಭಿನಂದಿಸಿದ್ದಾರೆ.