ಮೂಡುಬಿದಿರೆ: ರೋಟರಿ ಎಜುಕೇಶನ್ ಸೊಸೈಟಿ ಆಡಳಿತದಲ್ಲಿರುವ ರೋಟರಿ ಆಂಗ್ಲ ಮಾಧ್ಯಮ ಶಾಲೆಯು 2025–26ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ವಿದ್ಯಾರ್ಥಿನಿ ಆರ್ತಿಕ್ಷಾ ರಾವ್ ಅವರು 619 ಅಂಕಗಳು (ಶೇ.99.04) ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ರಾಜ್ಯ ಮಟ್ಟದಲ್ಲಿ 7ನೇ rank ಗಳಿಸಿದ್ದಾರೆ. ಸಮನ್ವಿ ಎಸ್‌. 612 ಅಂಕಗಳು (ಶೇ.97.92) ಹಾಗೂ ಪ್ರೇಕ್ಷಾ ಎಚ್‌. ಪೂಜಾರಿ 609 ಅಂಕಗಳು (ಶೇ.97.44) ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 15 ಮಂದಿ ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 24 ಮಂದಿ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪೂರ್ಣ ಅಂಕಗಳನ್ನು ಗಳಿಸಿದ್ದಾರೆ.

ಪರೀಕ್ಷೆಗೆ ಹಾಜರಾದ ಎಲ್ಲಾ 135 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅವರಲ್ಲಿ 68 ಮಂದಿ ಡಿಸ್ಟಿಂಕ್ಷನ್‌, 65 ಮಂದಿ ಪ್ರಥಮ ದರ್ಜೆ ಹಾಗೂ ಉಳಿದವರು ದ್ವಿತೀಯ ಮತ್ತು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ.ಎಂ., ಕಾರ್ಯದರ್ಶಿ ಅನಂತಕೃಷ್ಣ ರಾವ್, ಹಾಗೂ ಸಂಚಾಲಕ ಪ್ರವೀಣ್ ಚಂದ್ರ ಜೈನ್ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಅಭಿನಂದಿಸಿದ್ದಾರೆ.