ಮೂಡುಬಿದಿರೆ: ಆಳ್ವಾಸ್ ಸಿಬಿಎಸ್‌ಇ ಪ್ರೌಢಶಾಲೆಯ ವಿದ್ಯಾರ್ಥಿನಿ ಅನ್ವಿತಾ ಉಮೇಶ್ ರಾವ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸೇ.99.2 ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ. ಅದೇ ಶಾಲೆಯ ಆಧ್ಯ ಭಟ್ ಶೇ.99 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಮೂಡುಬಿದಿರೆಯ ಲೆಕ್ಕಪರಿಶೋಧಕ ಉಮೇಶ್ ರಾವ್ ಹಾಗೂ ಅಕೌಂಟೆಂಟ್ ದೀಪಾ ದಂಪತಿಯ ಪುತ್ರಿ. ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಸಿಕ್ಕಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅನ್ವಿತಾ, ಮುಂದೆ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಏರೋಸ್ಪೇಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಇಸ್ರೋ ಸಂಸ್ಥೆಗೆ ಸೇರಿ ವಿಜ್ಞಾನಿಯಾಗುವ ಗುರಿ ಹೊಂದಿದ್ದಾರೆ. ಅದೇ ರೀತಿ, ಆಳ್ವಾಸ್ ಸಿಬಿಎಸ್‌ಇ ಪ್ರೌಢಶಾಲೆಯ ಮತ್ತೊಬ್ಬ ವಿದ್ಯಾರ್ಥಿನಿ ಆಧ್ಯ ಭಟ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 99 ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಇವರು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಸತ್ಯನಾರಾಯಣ ಭಟ್ ಹಾಗೂ ಆಳ್ವಾಸ್ ಪಿಯು ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ. ರೂಪ ಭಟ್ ದಂಪತಿಯ ಪುತ್ರಿ. ಶೇ. 98ಕ್ಕಿಂತ ಹೆಚ್ಚು ಅಂಕಗಳಿಸುವ ನಿರೀಕ್ಷೆ ಹೊಂದಿದ್ದ ಆಧ್ಯ, ಫಲಿತಾಂಶದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಪಿಯುಸಿಯಲ್ಲಿ ಪಿಸಿಎಂಬಿ ವಿಭಾಗವನ್ನು ಆಯ್ಕೆ ಮಾಡಿಕೊಂಡು ಉತ್ತಮ ಅಂಕ ಗಳಿಸಿ ವೈದ್ಯೆಯಾಗುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.