ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಿಧನ್ಯಾ ಅಶೋಕ್ ಸುವರ್ಣ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 96 ಅಂಕಗಳನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದ ಪಿಸಿಎಂಸಿ ವಿಷಯಗಳಲ್ಲಿ ರಿಧನ್ಯಾ ಅತ್ಯುತ್ತಮ ಸಾಧನೆ ಮಾಡಿದ್ದು, ಒಟ್ಟಾರೆ 600 ಅಂಕಗಳಲ್ಲಿ 575 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ. ಈಕೆ ಮೂಡುಬಿದಿರೆ ಬಿರಾವಿನ ಅಶೋಕ್ ಸುವರ್ಣ- ವಿನುತಾ ಅಶೋಕ್ ದಂಪತಿಯ ಪುತ್ರಿ.