ಎಲ್ಲ ಲೇಖನಗಳು

1105 ಲೇಖನಗಳು

ಮೂಡುಬಿದಿರೆ: ಯಕ್ಷಗಾನ ಹವ್ಯಾಸಿ ಭಾಗವತ ಸಂಪಿಗೆ ಮಾಧವ ಆಚಾರ್ ನಿಧನ

ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದ ನಿವೃತ್ತ ಉದ್ಯೋಗಿ, ಪ್ರಸಿದ್ಧ ಹವ್ಯಾಸಿ ಯಕ್ಷಗಾನ ಭಾಗವತ ಸಂಪಿಗೆ ಮಾಧವ ಆಚಾರ್ ಶನಿವಾರ ಬೆಳಿಗ್ಗೆ ನಿಧನರಾದರು. 60 ವರ್ಷ ಪ್ರಾಯದ ಅವರು ಇತ್ತೀಚೆಗಷ್ಟೇ ವೃತ್ತಿಜೀವನದಿಂದ ನಿವೃತ್ತರಾಗಿದ್ದರು. ಮೃತರು ಪತ್ನಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ನಿಡ್ಡೋಡಿಯಲ್ಲಿ ಧರೆಗುರುಳಿದ ಮರ-ವಿದ್ಯುತ್ ಕಂಬ, ಸಂಚಾರ ಸ್ಥಗಿತ – ವಿದ್ಯುತ್ ವ್ಯತ್ಯಯ!

ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ಡೋಡಿ ದಡ್ಡು ಪೆಟ್ರೋಲ್ ಬಂಕ್ ಸಮೀಪ, ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಗಣಪತಿಕಾಯಿ ಮರ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಈ ಘಟನೆ ನಡೆದಿದ್ದು, ಮರ ಬೀಳುವ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ.

ಕಾಲಿನಲ್ಲೇ ದಾಖಲೆ ಬರೆದ ಕೌಶಿಕ್ ಆಚಾರ್ಯ:ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಿಂದ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ

ಕಾಲಿನಲ್ಲೇ ದಾಖಲೆ ಬರೆದ ಕೌಶಿಕ್ ಆಚಾರ್ಯ:ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಿಂದ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ

ಮೂಡುಬಿದಿರೆ: ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರು ನಿರಾಶ್ರಿತರ ಕೇಂದ್ರಕ್ಕೆ: ಸಮಾಜ ಕಲ್ಯಾಣ ಇಲಾಖೆ ಕಾರ್ಯಾಚರಣೆ

ಮೂಡುಬಿದಿರೆ: ಇಲ್ಲಿನ ಪೇಟೆ ಹಾಗೂ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದ್ದಾರೆ.

‘ಸ್ಪಾರ್ಕ್-2026’: ಸಮಗ್ರ ದ್ವಿತೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಧವಲಾ ಕಾಲೇಜು

ಮಂಗಳೂರಿನ ಸ್ವಸ್ತಿಕಾ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಸ್ಪಾರ್ಕ್-2026’ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಧವಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಲಸು ಪ್ರಿಯರಿಗೆ ಸವಿಯಾದ ಔತಣ: ಮೇ 8ರಿಂದ ಮೂಡುಬಿದಿರೆಯಲ್ಲಿ ಹಲಸು ಮೇಳಕ್ಕೆ ಆಮಂತ್ರಣ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಪವರ್ ಫ್ರೆಂಡ್ಸ್ ಬೆದ್ರ, ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್ ಇವರ ಸಂಯುಕ್ತ ಆಶ್ರಯದಲ್ಲಿ ಮೇ 8, 9 ಮತ್ತು 10ರಂದು ಮೂರು ದಿನಗಳ ಕಾಲ "ಬೃಹತ್ ಹಲಸು ಮೇಳ" ನಡೆಯಲಿದೆ ಎಂದು ವಂಶಿ ಇವೆಂಟ್ಸ್ ಮಾಲಕಿ ರಮಿತಾ ಸೂರ್ಯವಂಶಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೇಸಿಗೆಯ ಸೆಕೆಗೆ ಬ್ರೇಕ್ : ಮೇ 6ರಿಂದ ಮೂಡುಬಿದಿರೆಯಲ್ಲಿ ಮಳೆಯಾಗುವ ಸಾಧ್ಯತೆ!

ಕರಾವಳಿಯ ಪ್ರಮುಖ ನಗರ ಮೂಡುಬಿದಿರೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಮೇ 6 ರಿಂದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯಾಗಲಿದ್ದು, ಒಂದು ವಾರ ಕಾಲ ಮಳೆ ಬರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೂಡುಬಿದಿರೆ: ಶ್ರೀರಾಮ ಮಂದಿರ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಮೆರವಣಿಗೆ

ಮೂಡುಬಿದಿರೆ: ಇಲ್ಲಿನ ಶ್ರೀ ರಾಮಪುರ ಗೌರಿಕೆರೆಯ ದೇವಾಡಿಗರ ಸುಧಾರಕ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ರಾಮ ಮಂದಿರದಲ್ಲಿ ಮೇ 6 ರಿಂದ 10ರವರೆಗೆ ಸಪರಿವಾರ ಶ್ರೀರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಮಂಗಳವಾರ ಸಾಯಂಕಾಲ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಅಲಂಗಾರು ಗುರುಮಠದಲ್ಲಿ ಅದ್ವೇಷ್ಟಿಕಾ ಶಿಲಾ ಮುಹೂರ್ತ: ಶ್ರೀ ಜಗದ್ಗುರು ಅಯ್ಯಸ್ವಾಮಿ ಮಠದ ಜೀರ್ಣೋದ್ಧಾರಕ್ಕೆ ಚಾಲನೆ

ಅಲಂಗಾರು ಗುರುಮಠದಲ್ಲಿ ಅದ್ವೇಷ್ಟಿಕಾ ಶಿಲಾ ಮುಹೂರ್ತ: ಶ್ರೀ ಜಗದ್ಗುರು ಅಯ್ಯಸ್ವಾಮಿ ಮಠದ ಜೀರ್ಣೋದ್ಧಾರಕ್ಕೆ ಚಾಲನೆ

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಈ ವರ್ಷದಿಂದಲೇ ಎಂಬಿಬಿಎಸ್ ಕೋರ್ಸ್ ಪ್ರಾರಂಭ: ಡಾ. ಎಂ. ಮೋಹನ ಆಳ್ವ ಘೋಷಣೆ

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಈ ವರ್ಷದಿಂದಲೇ ಎಂಬಿಬಿಎಸ್ ಕೋರ್ಸ್ ಪ್ರಾರಂಭ: ಡಾ. ಎಂ. ಮೋಹನ ಆಳ್ವ ಘೋಷಣೆ

ಇರುವೈಲಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತೆಂಗು ಸಹಿತ‌ ಮರಗಿಡಗಳಿಗೆ ಹಾನಿ

ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪುಗುಡ್ಡೆ ಎಂಬಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು, ತೋಟದಲ್ಲಿದ್ದ ತೆಂಗು ಹಾಗೂ ವಿವಿಧ ಮರಗಿಡಗಳು ಸುಟ್ಟು ಹೋಗಿವೆ.

ದಿ.ವಿಜೇಶ್ ಅಮೀನ್, ದಿ.ಸುಹಾಸ್ ಶೆಟ್ಟಿ ಸ್ಮರಣಾರ್ಥ ಅಹಿಂಸಾ ಗೋಶಾಲೆಗೆ ಟೀಮ್ ಜಿಗರ್ಸ್ ವತಿಯಿಂದ ಬೈಹುಲ್ಲು ಸಮರ್ಪಣೆ

ಮೂಡುಬಿದಿರೆ: ಟೀಮ್ ಜಿಗರ್ಸ್ ವತಿಯಿಂದ ದಿ.ವಿಜೇಶ್ ಅಮೀನ್ ಮೂಡುಬಿದಿರೆ ಹಾಗೂ ದಿ.ಸುಹಾಸ್ ಶೆಟ್ಟಿ ಬಜ್ಪೆ ಅವರ ನೆನಪಿಗಾಗಿ ಅಹಿಂಸಾ ಗೋಶಾಲೆಗೆ ಬೈಹುಲ್ಲನ್ನು ವಿತರಿಸಲಾಯಿತು.

ಮೂಡುಬಿದಿರೆ: ಸರ್ಕಾರಿ ಶಾಲಾ ಮಕ್ಕಳಿಗೆ ಮಾದರಿ ಬೇಸಿಗೆ ಶಿಬಿರ ಸಮಾಪನ: ಯುವವಾಹಿನಿ, ವೀಚೀಸ್ ಸಂಸ್ಥೆಯಿಂದ ಆಯೋಜನೆ

ಯುವವಾಹಿನಿ ಮೂಡುಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ಒಂದು ವಾರದ ಉಚಿತ ಬೇಸಿಗೆ ಶಿಬಿರವು ಸಮಾಜ ಮಂದಿರದಲ್ಲಿ ಸಂಪನ್ನಗೊಂಡಿತು.

ಪಶ್ಚಿಮ ಬಂಗಾಳ ಸೇರಿ ವಿವಿಧೆಡೆ ಬಿಜೆಪಿ ಜಯಭೇರಿ- ಮೂಡುಬಿದಿರೆ ಬಿಜೆಪಿ ವಿಜಯೋತ್ಸವ

ಮೂಡುಬಿದಿರೆ:ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಖಾಸಗಿ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.