ಎಲ್ಲ ಲೇಖನಗಳು

1103 ಲೇಖನಗಳು

'ಖೇಲ್ ಧವಳಾ’- ಗ್ರಾಮೀಣ ಕ್ರೀಡಾಕೂಟ :ಧವಳಾ ಕಾಲೇಜು ದೈಹಿಕ ಶಿಕ್ಷಣ ವಿಭಾಗದಿಂದ ಬೆಳುವಾಯಿಯಲ್ಲಿ ಆಗಸ್ಟ್ 22ರಂದು ‘ಕೆಸರಲ್ಲೊಂದು ದಿನ 2026’

ಮೂಡುಬಿದಿರೆ: ದಿಗಂಬರ ಜೈನ ವಿದ್ಯಾವರ್ಧಕ ಸಂಘ ಆಡಳಿತಕ್ಕೊಳಪಟ್ಟ ಶ್ರೀ ಧವಳಾ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ‘ಖೇಲ್ ಧವಳಾ’ ಗ್ರಾಮೀಣ ಕ್ರೀಡಾಕೂಟ ‘ಕೆಸರಲ್ಲೊಂದು ದಿನ – 2026’ ಆಗಸ್ಟ್ 22ರಂದು ಬೆಳುವಾಯಿಯಲ್ಲಿ ಆಯೋಜಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಮಳೆ ರಜೆ ಹೊಂದಾಣಿಕೆ: ಶನಿವಾರ ಪೂರ್ಣ ತರಗತಿ, ಸಂಜೆ ಹೆಚ್ಚುವರಿ ಬೋಧನೆಗೆ ಸೂಚನೆ

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಿಂದ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಗಳನ್ನು ಘೋಷಿಸಿದ್ದರು. ಈ ರಜೆಯಿಂದ ಉಂಟಾದ ಬೋಧನಾ ಅವಧಿಗಳ ಕೊರತೆಯನ್ನು ಸರಿದೂಗಿಸಲು ಶಾಲೆಗಳಲ್ಲಿ ಹೊಂದಾಣಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಪುತ್ತಿಗೆ ಗ್ರಾಮಕ್ಕೆ ₹1 ಕೋಟಿ ಡಿಆರ್‌ಇ ಯೋಜನೆ: ಸೌರ ವಿದ್ಯುತ್‌ನಿಂದ ಗ್ರಾಮಾಭಿವೃದ್ಧಿಗೆ ಹೊಸ ರೂ

ಮೂಡುಬಿದಿರೆ: ಮಾದರಿ ಸೋಲಾರ್‌ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಪುತ್ತಿಗೆ ಗ್ರಾಮ ಪಂಚಾಯಿತಿಗೆ ಲಭಿಸಿರುವ ಸುಮಾರು ₹1 ಕೋಟಿ ಅನುದಾನವನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಮರ್ಪಕವಾಗಿ ಬಳಸುವ ಕುರಿತು ಶುಕ್ರವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಪಾಡ್ಯಾರ್ ಫ್ರೆಂಡ್ಸ್ ವತಿಯಿಂದ ಆಗಸ್ಟ್ 23ರಂದು ಕೆಸರುಗದ್ದೆ ಕ್ರೀಡಾಕೂಟ

ಮೂಡುಬಿದಿರೆ: ಪಾಡ್ಯಾರ್ ಫ್ರೆಂಡ್ಸ್ ಆಶ್ರಯದಲ್ಲಿ 2ನೇ ವರ್ಷದ ‘ಕೆಸರ್ದ ಗೊಬ್ಬು’ (ಕೆಸರುಗದ್ದೆ ಕ್ರೀಡಾಕೂಟ) ಕಾರ್ಯಕ್ರಮವು 2026ರ ಆಗಸ್ಟ್ 23ರಂದು ಬನ್ನಡ್ಕ ಸಮೀಪದ ಬಾಕ್ಯಾರ್ ಪಾಡ್ಯಾರ್‌ನಲ್ಲಿ ಆಯೋಜಿಸಲಾಗಿದೆ.

ರೋಟರಿ ಕ್ಲಬ್, ರೋಟರಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ: 107 ಮಂದಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ

ಮೂಡುಬಿದಿರೆ: ರೋಟರಿ ಕ್ಲಬ್, ರೋಟರಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಗಸ್ಟ್ 21ರಂದು ರೋಟರಿ ಸಮ್ಮಿಲನ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಉಚಿತ ರಕ್ತದ ಗುಂಪು ತಪಾಸಣೆ ಹಾಗೂ ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯುವ ಸೌಲಭ್ಯವನ್ನು ರೋಟರಿ ಕ್ಲಬ್ ಹಾಗೂ ರೋಟರಿ ಶಾಲಾ ವತಿಯಿಂದ ಒದಗಿಸಲಾಯಿತು.

ಐಸಿವೈಎಂ ‘ಸ್ಕಿಲ್ ಫಿಯೆಸ್ಟಾ 2026’: ಯುವಜನರಿಗೆ ಕೌಶಲ್ಯಾಭಿವೃದ್ಧಿ ಮಾಸ್ಟರ್‌ಕ್ಲಾಸ್

ಮೂಡುಬಿದಿರೆ: ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ಐಸಿವೈಎಂ) ಮಂಗಳೂರು ಧರ್ಮಪ್ರಾಂತ್ಯದ ಕೇಂದ್ರ ಸಮಿತಿ ವತಿಯಿಂದ ಮಂಗಳೂರು ಧರ್ಮಪ್ರಾಂತ್ಯದ ಪಿಯುಸಿಯಿಂದ 35 ವರ್ಷದವರೆಗಿನ ಕ್ಯಾಥೋಲಿಕ್ ಯುವಜನರು ಹಾಗೂ ವಿದ್ಯಾರ್ಥಿಗಳಿಗಾಗಿ ‘ಸ್ಕಿಲ್ ಫಿಯೆಸ್ಟಾ 2026’ ಎಂಬ ಒಂದು ದಿನದ ಕೌಶಲ್ಯಾಭಿವೃದ್ಧಿ ಮಾಸ್ಟರ್‌ಕ್ಲಾಸ್ ಆಯೋಜಿಸಲಾಗಿದೆ.

ಮೂಡುಬಿದಿರೆ: ನಾರಾಯಣಗುರು ಜನ್ಮದಿನಾಚರಣೆ, 40ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣಗುರು ಸೇವಾದಳ ಹಾಗೂ ಶ್ರೀ ನಾರಾಯಣಗುರು ಮಹಿಳಾ ಘಟಕದ ವತಿಯಿಂದ ಸೆ. 6ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುವಿನ 172ನೇ ಜನ್ಮದಿನಾಚರಣೆ, ಮೂರ್ತಿ ಪ್ರತಿಷ್ಠಾಪನೆಯ 40ನೇ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿಲ್ಲವ ಸಂಘದಲ್ಲಿ ನಡೆಯಿತು.

ಮಣಿ ಕೋಟೆಬಾಗಿಲು ರಚನೆಯ ‘ಪ್ರಶ್ನಾರ್ಥಕ’ ತುಳು ನಾಟಕದ ಶೀರ್ಷಿಕೆ ಬಿಡುಗಡೆ

ಮೂಡುಬಿದಿರೆ: ರಂಗಭೂಷಣ ಮಣಿ ಕೋಟೆಬಾಗಿಲು ಸಾರಥ್ಯದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ಈ ವರ್ಷದ ನೂತನ ತುಳು ನಾಟಕ ‘ಪ್ರಶ್ನಾರ್ಥಕ’ದ ಶೀರ್ಷಿಕೆ ಬಿಡುಗಡೆ ಸಮಾರಂಭ ಬುಧವಾರ ಸಂಜೆ ಕೋಟೆಬಾಗಿಲು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯಿತು.

ಬಾಂಧವ್ಯ 2026: ಮೂಡುಬಿದಿರೆ ಛಾಯಾಗ್ರಾಹಕರ ಕುಟುಂಬಗಳ ಸೌಹಾರ್ದ ಕೂಟ-ಮಾನವೀಯ ಸಂದೇಶ ಸಾರುವ ಹೊಣೆ ಛಾಯಾಗ್ರಾಹಕರಿಗಿದೆ- ವಾಲ್ಟರ್ ನಂದಳಿಕೆ

ಮೂಡುಬಿದಿರೆ: ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಮೂಡುಬಿದಿರೆ ವಲಯದ ವತಿಯಿಂದ ‘ಬಾಂಧವ್ಯ 2026 - ಛಾಯಾ ಕುಟುಂಬದ ಸಂಭ್ರಮ’ ಕಾರ್ಯಕ್ರಮ ಬುಧವಾರ ಸಂಜೆ ಮೂಡುಬಿದಿರೆಯ ಕಲ್ಪವೃಕ್ಷ ಸಭಾ ಭವನದಲ್ಲಿ ನಡೆಯಿತು.

ಆಳ್ವಾಸ್ ಕಾಲೇಜಿನಲ್ಲಿ ಆ್ಯಂಟಿ ರ‍್ಯಾಗಿಂಗ್ ಸಪ್ತಾಹ : ರ‍್ಯಾಗಿಂಗ್ ಮುಕ್ತ ಕ್ಯಾಂಪಸ್ ನಿರ್ಮಾಣ ಎಲ್ಲರ ಹೊಣೆ- ಪೊಲೀಸ್ ಅಧಿಕಾರಿ ಪ್ರತಿಭಾ

ಮೂಡುಬಿದಿರೆ: ರ‍್ಯಾಗಿಂಗ್ ಮುಕ್ತ ಹಾಗೂ ಸುರಕ್ಷಿತ ಕ್ಯಾಂಪಸ್ ನಿರ್ಮಾಣಕ್ಕೆ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರು ಮತ್ತು ಸಮಾಜದ ಪ್ರತಿಯೊಬ್ಬರ ಸಹಭಾಗಿತ್ವ ಅಗತ್ಯ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯ ಉಪ ಪೊಲೀಸ್ ನಿರೀಕ್ಷಕಿ ಪ್ರತಿಭಾ ಹೇಳಿದರು.

ಆಳ್ವಾಸ್ ‘ಸಕ್ಷಮಾ’ ವತಿಯಿಂದ ವಿಶೇಷ ಉಪನ್ಯಾಸ: ಮಹಿಳಾ ಸಬಲೀಕರಣಕ್ಕೆ ಅರ್ಹತೆ, ಆತ್ಮವಿಶ್ವಾಸವೇ ಬಲ- ಶ್ಯಾಮಲಾ ಎಸ್. ಕುಂದರ್

ಮೂಡುಬಿದಿರೆ: ಮಹಿಳಾ ಸಬಲೀಕರಣವೆಂದರೆ ಕೇವಲ ಮೀಸಲಾತಿ ಅಥವಾ ಅವಕಾಶಗಳನ್ನು ಪಡೆಯುವುದಲ್ಲ; ತನ್ನ ಸಾಮರ್ಥ್ಯ, ಅರ್ಹತೆ ಹಾಗೂ ಆತ್ಮವಿಶ್ವಾಸದ ಮೂಲಕ ಸಮಾಜದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಳ್ಳುವುದಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ವಿಶ್ರಾಂತ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.

ಬೆದ್ರ ಜೈನಮಠ ‘ಶ್ರೀಕೃಷ್ಣ ಸಂಧಾನ’ ತಾಳಮದ್ದಳೆ- ಅಜಯ್ ದೀಕ್ಷಿತ್ ಶೆಟ್ಟಿಗೆ ಸನ್ಮಾನ: ಯಕ್ಷಗಾನ ತಾಳಮದ್ದಳೆ ಸನಾತನ ಧರ್ಮದ ಭಾರತೀಯ ದರ್ಶನಕ್ಕೆ ಸುಲಭ ಮಾರ್ಗ- ಭಟ್ಟಾರಕ ಸ್ವಾಮೀಜಿ ಶ್ರೀ

ಮೂಡುಬಿದಿರೆ: ಪಂಚಭೂತ ಮತ್ತು ಪಂಚೇಂದ್ರಿಯ ತತ್ವಗಳ ಪಾರಮಾರ್ಥಿಕ ಸತ್ಯ ಹಾಗೂ ಕರ್ಮಸಿದ್ಧಾಂತವನ್ನು ವಿಸ್ತರಿಸಿ ತಿಳಿಸುವ ಯಕ್ಷಗಾನ ತಾಳಮದ್ದಳೆ, ಸನಾತನ ಧರ್ಮದ ಭಾರತೀಯ ದರ್ಶನದ ಪ್ರವೇಶಕ್ಕೆ ಸುಲಭ ಮಾರ್ಗವಾಗಿದೆ ಎಂದು ಮೂಡುಬಿದಿರೆ ಶ್ರೀ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಮೂಡುಬಿದಿರೆಯಲ್ಲಿ ಪಾರ್ಶ್ವನಾಥ ಮೋಕ್ಷ ಸಪ್ತಮಿ: ಶ್ರೀ ಮಠ, ಗುರು ಬಸದಿಯಲ್ಲಿ ವಿಶೇಷ ಪೂಜೆ

ಜೈನಕಾಶಿ ಮೂಡುಬಿದಿರೆಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಸಪ್ತಮಿ ಅಂಗವಾಗಿ ಬುಧವಾರ ಶ್ರೀ ಮಠ ಹಾಗೂ ಗುರು ಬಸದಿಯಲ್ಲಿ ವಿಶೇಷ ಪೂಜೆ ನೆರವೇರಿತು.

ಮೂಡುಬಿದಿರೆ ಪದ್ಮಶ್ರೀ ಗ್ಯಾಸ್ ಏಜೆನ್ಸಿಯಲ್ಲಿ ಎಚ್‌ಪಿ ನವ್ಯ ಸಿಲಿಂಡರ್ ಬಿಡುಗಡೆ: 90 ನಿಮಿಷದಲ್ಲಿ ಮನೆ ಬಾಗಿಲಿಗೆ ವಿತರಣೆಗೆ ಚಾಲನೆ

ಮೂಡುಬಿದಿರೆ: ‘ನ್ಯೂ ಇಂಡಿಯಾ, ನ್ಯೂ ಎನರ್ಜಿ’ ಪರಿಕಲ್ಪನೆಯೊಂದಿಗೆ ಎಚ್‌ಪಿ ಕಂಪನಿಯ ನೂತನ ‘ಎಚ್‌ಪಿ ನವ್ಯ’ ಲೈಟ್‌ವೇಟ್ ಎಲ್‌ಪಿಜಿ ಸಿಲಿಂಡರ್ ಅನ್ನು ಮಂಗಳೂರು ವಿಭಾಗದಲ್ಲಿ ಮೊದಲ ಬಾರಿಗೆ ಮೂಡುಬಿದಿರೆಯ ಬೆಟ್ಕೇರಿಯ ಪದ್ಮಶ್ರೀ ಗ್ಯಾಸ್ ಏಜನ್ಸಿಯಲ್ಲಿ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ಮೊದಲ ಗ್ರಾಹಕರಾದ ಟೀನಾ ರಾಡ್ರಿಗಸ್ ಅವರಿಗೆ ಸಿಲಿಂಡರ್ ಹಸ್ತಾಂತರಿಸುವ ಮೂಲಕ ಸೇವೆಗೆ ಚಾಲನೆ ನೀಡಲಾಯಿತು.

ಪುತ್ತಿಗೆ ಗ್ರಾಮ ಪಂಚಾಯತಿಯ ಮಾಜಿ ಸದಸ್ಯೆ ಜಲಜ ಕುಲಾಲ್ ನಿಧನ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತಿಯ ಮಾಜಿ ಸದಸ್ಯೆ, ಕಾಪಿಕಾಡು ಹಂಡೇಲು ನಿವಾಸಿ ಜಲಜ ಕುಲಾಲ್ (65) ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬುಧವಾರ ಮಧ್ಯಾಹ್ನ ನಿಧನರಾದರು.

ಮೂಡುಬಿದಿರೆ : ಜನ ಸಂಘದ ಹಿರಿಯ ಕಾರ್ಯಕರ್ತ ಜಿನದತ್ತ ಹೆಗ್ಡೆ ನಿಧನ

ಮೂಡುಬಿದಿರೆ: ಕಾಂಗ್ರೆಸ್‌ನ ಪ್ರಾಬಲ್ಯವಿದ್ದ ಕಾಲದಲ್ಲಿ ಜನ ಸಂಘದ ಮೂಲಕ ದರೆಗುಡ್ಡೆಯಲ್ಲಿ ಪಕ್ಷದ ಸಿದ್ಧಾಂತವನ್ನು ಜನರಿಗೆ ಪರಿಚಯಿಸಿ, ಮನೆ ಮನೆಗೆ ತೆರಳಿ ಸಂಘಟನೆಯನ್ನು ಗಟ್ಟಿಗೊಳಿಸಿದ್ದ ಜನ ಸಂಘದ ಹಿರಿಯ ಕಾರ್ಯಕರ್ತ ಜಿನದತ್ತ ಹೆಗ್ಡೆ (90) ಬುಧವಾರ ನಿಧನರಾದರು.

2025ರ ಅಪಘಾತದಲ್ಲಿ ಗಾಯಗೊಂಡಿದ್ದ ಮೂಡುಬಿದಿರೆ ಸಂಪಿಗೆಯ ಮಹಿಳೆ ಸಾವು

ಮೂಡುಬಿದಿರೆ: ಅಬಕಾರಿ ನಿರೀಕ್ಷಕ, ಪುತ್ತಿಗೆ ಗ್ರಾಮದ ಸಂಪಿಗೆ ನಿವಾಸಿ ರಾಜೇಶ್ ನಾಯ್ಕ್ ಅವರ ಪತ್ನಿ ಜಯಲಕ್ಷಿ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ವಿಶ್ವ ಛಾಯಾಗ್ರಹಣ ದಿನಾಚರಣೆ: ಮೂಡುಬಿದಿರೆಯ ಅಭಯ್ ಕುಮಾರ್ ಅವರಿಗೆ ‘ಛಾಯಾರತ್ನ’ ಪ್ರಶಸ್ತಿ

ಮೂಡುಬಿದಿರೆ: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮೂಡುಬಿದಿರೆ ಪದ್ಮಶ್ರೀ ಸ್ಟುಡಿಯೋ ಮಾಲಕ ಅಭಯ್ ಕುಮಾರ್ ಅವರಿಗೆ ‘ಛಾಯಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕ್ಯಾಮೆರಾ ಮಾತ್ರ ಸಾಕಾಗಲ್ಲ! ಫೋಟೋಗ್ರಾಫರ್ ಬ್ಯಾಗ್‌ನಲ್ಲಿ ಇರಲೇಬೇಕಾದ ಸ್ಮಾರ್ಟ್ ಗ್ಯಾಜೆಟ್‌ಗಳು

ಮೂಡುಬಿದಿರೆ: ಇಂದಿನ ಡಿಜಿಟಲ್ ಯುಗದಲ್ಲಿ ಫೋಟೋಗ್ರಾಫರ್‌ನ ಕೆಲಸ ಕ್ಯಾಮೆರಾದಲ್ಲಿ ಫೋಟೋ ಸೆರೆಹಿಡಿಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಫೋಟೋವನ್ನು ತಕ್ಷಣ ವರ್ಗಾಯಿಸುವುದು, ಆಯ್ಕೆ ಮಾಡುವುದು, ಎಡಿಟ್ ಮಾಡುವುದು, ಬ್ಯಾಕಪ್ ಮಾಡುವುದು ಹಾಗೂ ಗ್ರಾಹಕ, ಮಾಧ್ಯಮ ಸಂಸ್ಥೆ ಅಥವಾ ಸಾಮಾಜಿಕ ಜಾಲತಾಣಗಳಿಗೆ ವೇಗವಾಗಿ ತಲುಪಿಸುವುದೂ ಫೋಟೋಗ್ರಫಿ ಕಾರ್ಯವಿಧಾನದ ಪ್ರಮುಖ ಭಾಗವಾಗಿದೆ.

ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಸ್ಯಶ್ಯಾಮಲಾ ಅಭಿಯಾನ: ಹೊಸಂಗಡಿ ದೇವಸ್ಥಾನದಲ್ಲಿ ಸಸಿಗಳ ವಿತರಣೆ

ಮೂಡುಬಿದಿರೆ: ಕಲ್ಲಬೆಟ್ಟು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ವರ್ಷಕ್ಕೆ 1000 ಗಿಡಗಳನ್ನು ನೆಟ್ಟು ಪೋಷಿಸುವ ಸಸ್ಯಶ್ಯಾಮಲಾ ಅಭಿಯಾನದಡಿ ಸಿಂಹ ಸಂಕ್ರಮಣದಂದು ಮಾರೂರು ಹೊಸಂಗಡಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ 100ಕ್ಕೂ ಹೆಚ್ಚು ಭಕ್ತಾದಿಗಳಿಗೆ ವಿವಿಧ ಜಾತಿಯ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.

ಮೂಡುಬಿದಿರೆ: ದಲಿತ ಕುಂದುಕೊರತೆ ಸಭೆಗೆ ಅಧಿಕಾರಿಗಳು ಗೈರು: ತಹಸೀಲ್ದಾರ್ ಕ್ರಮಕ್ಕೆ ಡಿಎಸ್ಎಸ್ ಆಕ್ರೋಶ-ಕಂದಾಯ ಸಚಿವರಿಗೆ ದೂರು ನೀಡಲು ನಿರ್ಧಾರ

ಮೂಡುಬಿದಿರೆ: ತಾಲೂಕು ಮಟ್ಟದ ದಲಿತ ಕುಂದುಕೊರತೆ ಸಭೆಗೆ ಪ್ರಮುಖ ಇಲಾಖಾ ಅಧಿಕಾರಿಗಳು ಗೈರುಹಾಜರಾಗಿದ್ದರೂ, ದಲಿತ ಮುಖಂಡರ ವಿರೋಧದ ನಡುವೆಯೇ ತಹಸೀಲ್ದಾರ್ ಸಭೆ ಮುಂದುವರಿಸಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಹಾಗೂ ದಲಿತ ಹಕ್ಕುಗಳ ಸಮಿತಿ ಖಂಡಿಸಿವೆ.

ಮುಡಾಯಿಕಾಡು ನಾಗದೇವರ ಸನ್ನಿಧಿಯಲ್ಲಿ ದೇವತಾ ಸೇವೆ; ದೇವಸ್ಥಾನ ನಿರ್ಮಾಣಕ್ಕೆ ಸಿದ್ಧತೆ

ಮೂಡುಬಿದಿರೆ: ಬೆಳುವಾಯಿ ಮುಡಾಯಿಕಾಡು ಶ್ರೀ ನಾಗದೇವರ ಸನ್ನಿಧಿಯಲ್ಲಿ ತನು ತಂಬಿಲ ಸೇವೆ, ದೇವಸ್ಥಾನದಲ್ಲಿ ಹೂವಿನ ಪೂಜೆ ಸೇರಿದಂತೆ ವಿವಿಧ ದೇವತಾ ಸೇವೆಗಳ ಪೂಜೆ ನೆರವೇರಿಸಲಾಯಿತು. ಪೂಜಾ ಸಾಹಿತ್ಯ ಒದಗಿಸಿ ಪೂರ್ಣ ಸಹಕಾರ ನೀಡಿದ ಊರ ಹಾಗೂ ಪರಊರ ಭಗವತ್ಭಕ್ತರಿಗೆ ಶ್ರೀ ನಾಗಬ್ರಹ್ಮ ಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.