ಎಲ್ಲ ಲೇಖನಗಳು

1104 ಲೇಖನಗಳು

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಯುವಶಕ್ತಿಯ ಸದ್ಬಳಕೆಯಿಂದ ನವಭಾರತ ನಿರ್ಮಾಣ- ಅಭಯಚಂದ್ರ ಜೈನ್

ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ತ್ಯಾಗ-ಬಲಿದಾನ ಸ್ಮರಣೆಯೊಂದಿಗೆ ಬ್ರೈಟ್ ಹೊರೈಝನ್‌ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

ಮೂಡುಬಿದಿರೆ: ಕರಿಮಣೇಲಿನ ಬ್ರೈಟ್ ಹೊರೈಝನ್ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.

ಸ್ವಾತಂತ್ರ್ಯೋತ್ಸವ: ಚೌಟರ ಅರಮನೆ ಮುಂಭಾಗದ ಉದ್ಯಾನದಲ್ಲಿ ರಾಣಿ ಅಬ್ಬಕ್ಕಗೆ ಗೌರವ ನಮನ-ಜವನೆರ್ ಬೆದ್ರ ಫೌಂಡೇಶನ್, ಅಬ್ಬಕ್ಕ ಬ್ರಿಗೇಡ್ ಆಯೋಜನೆ

ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ ಹಾಗೂ ಅದರ ಮಹಿಳಾ ಘಟಕ ‘ಅಬ್ಬಕ್ಕ ಬ್ರಿಗೇಡ್’ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ರೋಟರಿ ವಿದ್ಯಾಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಸ್ವಾತಂತ್ರ್ಯ ಹಕ್ಕಿನ ಜತೆಗೆ ಜವಾಬ್ದಾರಿ-ಡಾ. ಆಶೀರ್ವಾದ್ ಎಂ.ಪಿ.

ಮೂಡುಬಿದಿರೆ: ರೋಟರಿ ವಿದ್ಯಾಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಮರಾವತಿ ಸಭಾಭವನದಲ್ಲಿ ಆಚರಿಸಲಾಯಿತು. ರೋಟರಿ ಕ್ಲಬ್ ಮೂಡುಬಿದಿರೆಯ ಅಧ್ಯಕ್ಷ ಡಾ. ಆಶೀರ್ವಾದ್ ಎಂ.ಪಿ. ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಆಟೋರಿಕ್ಷಾ ಚಾಲಕ-ಮಾಲಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ: ವಕೀಲರ ಸಂಘದ ನೂತನ ಅಧ್ಯಕ್ಷ ಶರತ್ ಡಿ. ಶೆಟ್ಟಿಗೆ ಗೌರವ

ಮೂಡುಬಿದಿರೆ: ಆಟೋರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೂಡುಬಿದಿರೆ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶರತ್ ಡಿ. ಶೆಟ್ಟಿ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಕರ್ನಾಟಕ ಕಿರಿಯರ ಅಥ್ಲೆಟಿಕ್ಸ್‌ನಲ್ಲಿ ಆಳ್ವಾಸ್‌ಗೆ 33 ಪದಕ; 4 ಕೂಟ ದಾಖಲೆ

ಮೂಡುಬಿದಿರೆ: ಬೆಂಗಳೂರಿನ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ವತಿಯಿಂದ ನಡೆದ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2026ರಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು 15 ಚಿನ್ನ, 8 ಬೆಳ್ಳಿ ಹಾಗೂ 10 ಕಂಚು ಸೇರಿದಂತೆ ಒಟ್ಟು 33 ಪದಕಗಳನ್ನು ಗೆದ್ದುಕೊಂಡಿದ್ದು, ನಾಲ್ಕು ನೂತನ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ: ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನಕ್ಕೆ ಚಾಲನೆ

ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣೆ ಸಹಯೋಗದಲ್ಲಿ ಕಾನೂನು ಘಟಕ ಮೂಡುಬಿದಿರೆ ಹಾಗೂ ಟೀಮ್ ಬೆದ್ರ ವತಿಯಿಂದ ಹಮ್ಮಿಕೊಂಡ ‘ಬೆದ್ರದಲ್ಲಿ ಡ್ರಗ್ಸ್ ಬೇಡ ಬ್ರೋ’ ಸ್ಟಿಕ್ಕರ್ ಅಭಿಯಾನಕ್ಕೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ಶುಕ್ರವಾರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ಚಾಲನೆ ನೀಡಿದರು.

NCERT CEE ಪರೀಕ್ಷೆಯಲ್ಲಿ ಎಕ್ಸಲೆಂಟ್‌ನ ಮೌಲ್ಯ ಜೈನ್‌ಗೆ ಅಖಿಲ ಭಾರತ 25ನೇ ರ್‍ಯಾಂಕ್

ಮೂಡುಬಿದಿರೆ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ (NCERT) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (CEE–2026)ಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿನಿ ಮೌಲ್ಯ ವೈ.ಆರ್. ಜೈನ್ ಅಖಿಲ ಭಾರತ ಮಟ್ಟದಲ್ಲಿ 25ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಬನ್ನಡ್ಕದಲ್ಲಿ ದನಗಳಿಗೆ ಕ್ಯಾಂಟರ್ ಲಾರಿ ಡಿಕ್ಕಿ: ಒಂದು ದನ ಸಾವು, ಎರಡು ಗಂಭೀರ

ಮೂಡುಬಿದಿರೆ: ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಬನ್ನಡ್ಕ ದೈವಸ್ಥಾನದ ಬಳಿ ದನಗಳಿಗೆ ಡಿಕ್ಕಿಯಾಗಿದ್ದು, ಒಂದು ದನ ಮೃತಪಟ್ಟಿದೆ. ಎರಡು ದನಗಳು ಗಂಭೀರವಾಗಿ ಗಾಯಗೊಂಡಿವೆ.

ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ರೋವರ್ಸ್‌-ರೇಂಜರ್ಸ್‌, ಸಾಹಿತ್ಯ ಸಂಘ, ಇಕೋ ಕ್ಲಬ್‌ಗಳ ಉದ್ಘಾಟನೆ

ಮೂಡುಬಿದಿರೆ: ವಿದ್ಯಾರ್ಥಿಗಳ ಬದುಕಿಗೆ ಮೌಲ್ಯಗಳೇ ನಿಜವಾದ ಮೈಲುಗಲ್ಲುಗಳಾಗಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ ಹೇಳಿದರು.

ಆಳ್ವಾಸ್ ವೈದ್ಯಕೀಯ ಕಾಲೇಜಿಗೆ ತುಳು ಅಲ್ಪಸಂಖ್ಯಾತ ಮಾನ್ಯತೆ: ತುಳು ಭಾಷಿಕ ಅಲ್ಪಸಂಖ್ಯಾತರಿಗೆ 54 ಸೀಟುಗಳು

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗಸಂಸ್ಥೆಯಾದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ಗೆ ತುಳು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಕೋಟಾದಡಿ ಅನುಮೋದನೆ ದೊರೆತಿದೆ. 2026–27ನೇ ಶೈಕ್ಷಣಿಕ ವರ್ಷಕ್ಕೆ ಒಟ್ಟು 150 ಎಮ್‌ಬಿಬಿಎಸ್ ಸೀಟುಗಳಿಗೆ ಮಂಜೂರಾತಿ ದೊರೆತಿದ್ದು, ಈ ಪೈಕಿ 54 ಸೀಟುಗಳು ತುಳು ಭಾಷಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.

ಪಿಂಗಾರ ಕಲಾವಿದೆರ್ ಬೆದ್ರ ನೂತನ ನಾಟಕದ ಶೀರ್ಷಿಕೆ ಊಹಿಸಿ ಬಹುಮಾನ ಗೆಲ್ಲಿ: ಆಗಸ್ಟ್ 19ರಂದು ನಾಟಕದ ಶೀರ್ಷಿಕೆ ಬಿಡುಗಡೆ

ಪಿಂಗಾರ ಕಲಾವಿದೆರ್ ಬೆದ್ರ ನೂತನ ನಾಟಕದ ಶೀರ್ಷಿಕೆ ಊಹಿಸಿ ಬಹುಮಾನ ಗೆಲ್ಲಿ: ಆಗಸ್ಟ್ 19ರಂದು ನಾಟಕದ ಶೀರ್ಷಿಕೆ ಬಿಡುಗಡೆ

ಸಾವಿರ ಕಂಬಗಳ ಬಸದಿಯಲ್ಲಿ ಆಕರ್ಷಕ ದೀಪಾಲಂಕಾರ: ಆಗಸ್ಟ್ 15ರಿಂದ ಪ್ರತಿ ಭಾನುವಾರ ದೀಪಾಲಂಕಾರ ವೀಕ್ಷಣೆಗೆ ಅವಕಾಶ

ಮೂಡುಬಿದಿರೆ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೂಡುಬಿದಿರೆಯ ಇತಿಹಾಸ ಪ್ರಸಿದ್ಧ ಸಾವಿರ ಕಂಬಗಳ ಬಸದಿಯಲ್ಲಿ ವಿಶೇಷ ತ್ರಿವರ್ಣ ವಿದ್ಯುತ್ ದೀಪಾಲಂಕಾರ ಹಾಗೂ ಮಂಗಳವಾದ್ಯ ಕಾರ್ಯಕ್ರಮ ಆಗಸ್ಟ್ 15ರಂದು ನಡೆಯಲಿದೆ.

ಪುತ್ತಿಗೆ ಚಿಟ್ಟೆಮಾರು ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ಸಮ್ಯಕ್ ಕ್ಲಿನಿಕ್, ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂಡಳಿಯಿಂದ ಕಷಾಯ, ಮೆಂತೆಗಂಜಿ ವಿತರಣೆ

ಮೂಡುಬಿದಿರೆ: ಆಟಿ ಅಮಾವಾಸ್ಯೆ ಪ್ರಯುಕ್ತ ಸಮ್ಯಕ್ ಕ್ಲಿನಿಕ್ ಹಾಗೂ ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂಡಳಿ, ಸಂಪಿಗೆ–ಪುತ್ತಿಗೆ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 12ರಂದು ಚಿಟ್ಟೆಮಾರು ಪದ್ಮಾವತಿ ಜೈನ ಸಮುದಾಯ ಭವನದಲ್ಲಿ ಉಚಿತ ಕಷಾಯ, ಮೆಂತೆಗಂಜಿ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.

ಗ್ರಂಥಪಾಲಕರ ದಿನಾಚರಣೆ: ಮೂಡುಬಿದಿರೆ ಶಾಖಾ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ

ಮೂಡುಬಿದಿರೆ: ಜಿಲ್ಲಾ ಕೇಂದ್ರ ಗ್ರಂಥಾಲಯ ಇಲಾಖೆ, ಮಂಗಳೂರು ಇದರ ಮೂಡುಬಿದಿರೆ ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಗ್ರಂಥಾಲಯದ ಹಿರಿಯ ಓದುಗ ಗೋವಿಂದ ಆರ್. ಗ್ರಂಥಪಾಲಕರ ದಿನಾಚರಣೆಯ ಪ್ರಯುಕ್ತ ದೀಪ ಬೆಳಗಿಸಿ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

3,000ಕ್ಕೂ ಅಧಿಕ ಮಂದಿಗೆ ಆಳ್ವಾಸ್ ಆಯುರ್ವೇದದ ಆಟಿ ಕಷಾಯ

ಮೂಡುಬಿದಿರೆ: ಆಟಿ ತಿಂಗಳ ಅಮಾವಾಸ್ಯೆಯಂದು ಬ್ರಾಹ್ಮೀ ಮುಹೂರ್ತದಲ್ಲಿ ಹಾಲೆಮರದ (ಸಪ್ತಪರ್ಣ) ಕೆತ್ತೆಯನ್ನು ಸಂಗ್ರಹಿಸಿ, ಬೆಳ್ಳುಳ್ಳಿ, ಜೀರಿಗೆ, ಕಹಿಜೀರಿಗೆ, ಶುಂಠಿ, ಕಾಳುಮೆಣಸು, ಓಮ, ಮೆಂತೆ ಸೇರಿದಂತೆ ವಿವಿಧ ದ್ರವ್ಯಗಳನ್ನು ಸೇರಿಸಿ ತಯಾರಿಸುವ ಆಟಿ ಕಷಾಯವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದು ಶಾಸ್ತ್ರೀಯ ನಂಬಿಕೆ ಹಾಗೂ ಪರಂಪರೆಯ ಆಚರಣೆಯಾಗಿದೆ.

ಮೂಡುಬಿದಿರೆಯಲ್ಲಿ ಪಾಲೆಕೆತ್ತೆ ಕಷಾಯ ವಿತರಣೆ: ವಿಶ್ವ ತುಳುವೆರ್ ಸಂಘಟನೆ–ಎಕ್ಸಲೆಂಟ್ ಪಿಯು ಕಾಲೇಜು ಸಹಯೋಗ

ಮೂಡುಬಿದಿರೆಯಲ್ಲಿ ಪಾಲೆಕೆತ್ತೆ ಕಷಾಯ ವಿತರಣೆ: ವಿಶ್ವ ತುಳುವೆರ್ ಸಂಘಟನೆ–ಎಕ್ಸಲೆಂಟ್ ಪಿಯು ಕಾಲೇಜು ಸಹಯೋಗ

ಜವನೆರ್ ಬೆದ್ರ ಫೌಂಡೇಶನ್- ಬೆದ್ರದ ಕೃಷ್ಣೋತ್ಸವ 2026: ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್‌ಗೆ ಕೃಷ್ಣೋತ್ಸವ ಪ್ರಶಸ್ತಿ

ಮೂಡುಬಿದಿರೆ: ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ಆಯೋಜಿಸಿರುವ ‘ಬೆದ್ರದ ಕೃಷ್ಣೋತ್ಸವ 2026’ ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ ‘ಕೃಷ್ಣೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಮೂಡುಬಿದಿರೆ ಮಾಸ್ತಿಕಟ್ಟೆಯಲ್ಲಿ ಆದಿದ್ರಾವಿಡ ಸಂಘದ ಮಾಸಿಕ ಸಭೆ; ಆಟಿ ತಿನಿಸುಗಳ ಸವಿ

ಮೂಡುಬಿದಿರೆ: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಮೂಡುಬಿದಿರೆ ತಾಲೂಕು ಘಟಕದ ಮಾಸಿಕ ಸಭೆ ಹಾಗೂ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಕಾರ್ಯಕ್ರಮ ಮಾಸ್ತಿಕಟ್ಟೆ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಮೂಡುಬಿದಿರೆ ಭಂಡಾರಿ ಸಮಾಜ ಸೇವಾ ಸಂಘದಿಂದ 13ನೇ ವರ್ಷದ ‘ಆಟಿಡೊಂಜಿ ದಿನ’

ಮೂಡುಬಿದಿರೆ: ಇಲ್ಲಿನ ಭಂಡಾರಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ 13ನೇ ವರ್ಷದ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಆಗಸ್ಟ್ 9ರಂದು ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾ ವೇದಿಕೆಯಲ್ಲಿ ತುಳುನಾಡಿನ ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಜಾನಪದ ಪರಂಪರೆಯೊಂದಿಗೆ ನಡೆಯಿತು.