ಪ್ರಾದೇಶಿಕ

958 ಲೇಖನಗಳು

ಶಿರ್ತಾಡಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

ಮೂಡುಬಿದಿರೆ: ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಸುರಕ್ಷಾ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಮೂವರು ಮಹಿಳಾ ಅಧಿಕಾರಿಗಳನ್ನು ಆರೋಗ್ಯ ಕೇಂದ್ರದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ದಕ್ಷಿಣ ಕನ್ನಡ ಜೆಲ್ಲೆಯಲ್ಲಿ ಜುಲೈ 23ರಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಮಂಗಳೂರು : ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಾಗೂ ಯೆಲ್ಲೋ ಅಲರ್ಟ್ ಹಿನ್ನೆಲೆಯಲ್ಲಿ ಜುಲೈ 23, 2026ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ವಸತಿ ಶಾಲೆಗಳು, ಪದವಿಪೂರ್ವ ಕಾಲೇಜುಗಳು ಹಾಗೂ ಪದವಿಪೂರ್ವ ವಸತಿ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಜ್ಯೋತಿನಗರ ಶಾಲೆಗೆ ಮೂಡುಬಿದಿರೆ ಗ್ಯಾರೇಜು ಮಾಲಕರ ಸಂಘದಿಂದ ಧ್ವನಿವರ್ಧಕ ಕೊಡುಗೆ: ಸಾಹಿತ್ಯಾಸಕ್ತಿ ಬೆಳೆಸುವ ಸಂದೇಶ ಸಾರಿದ ಧನಂಜಯ ಮೂಡುಬಿದಿರೆ

ಜ್ಯೋತಿನಗರ ಶಾಲೆಗೆ ಮೂಡುಬಿದಿರೆ ಗ್ಯಾರೇಜು ಮಾಲಕರ ಸಂಘದಿಂದ ಧ್ವನಿವರ್ಧಕ ಕೊಡುಗೆ: ಸಾಹಿತ್ಯಾಸಕ್ತಿ ಬೆಳೆಸುವ ಸಂದೇಶ ಸಾರಿದ ಧನಂಜಯ ಮೂಡುಬಿದಿರೆ

ನೀಟ್ ಅಕ್ರಮ ವಿರೋಧಿಸಿ ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಂಧನ ಖಂಡನೆ - ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಒತ್ತಾಯ

ನೀಟ್ ಅಕ್ರಮ ವಿರೋಧಿಸಿ ಮೂಡುಬಿದಿರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಂಧನ ಖಂಡನೆ - ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಒತ್ತಾಯ

ಎಕ್ಸಲೆಂಟ್ ಶಾಲೆಯಲ್ಲಿ ನೂತನ ಶಾಲಾ ಸಂಸತ್ ಸದಸ್ಯರ ಪದಗ್ರಹಣ: ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ಶ್ರೇಷ್ಠ ವೇದಿಕೆ-ರವೀಂದ್ರ ಪುತ್ತೂರು

ಎಕ್ಸಲೆಂಟ್ ಶಾಲೆಯಲ್ಲಿ ನೂತನ ಶಾಲಾ ಸಂಸತ್ ಸದಸ್ಯರ ಪದಗ್ರಹಣ: ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ಶ್ರೇಷ್ಠ ವೇದಿಕೆ-ರವೀಂದ್ರ ಪುತ್ತೂರು

ಪುಸ್ತಕಗಳೇ ವ್ಯಕ್ತಿತ್ವ ರೂಪಿಸುವ ಶಕ್ತಿ: ಕ್ರಿಯೇಟಿವ್ ಪುಸ್ತಕ ಧಾರೆ-2026ರಲ್ಲಿ ಅಜಿತ್ ಹನುಮಕ್ಕನವರ್ ಕರೆ: 25 ಕೃತಿಗಳ ಲೋಕಾರ್ಪಣೆ

ಪುಸ್ತಕಗಳೇ ವ್ಯಕ್ತಿತ್ವ ರೂಪಿಸುವ ಶಕ್ತಿ: ಕ್ರಿಯೇಟಿವ್ ಪುಸ್ತಕ ಧಾರೆ-2026ರಲ್ಲಿ ಅಜಿತ್ ಹನುಮಕ್ಕನವರ್ ಕರೆ: 25 ಕೃತಿಗಳ ಲೋಕಾರ್ಪಣೆ

ಬನ್ನಡ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ NHAI ಹಸಿರು ನಿಶಾನೆ: ವಿವಿಧ ಅಭಿವೃದ್ಧಿ ಯೋಜನೆಗಳಿಗೆ ₹5.83 ಕೋಟಿ ಕಾಮಗಾರಿಗೆ ತಾತ್ವಿಕ ಅನುಮೋದನೆ- MP ಬ್ರಿಜೇಶ್ ಚೌಟ

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ-169ರ ಸಾಣೂರು–ಬಿಕರ್ನಕಟ್ಟೆ ಚತುಷ್ಪಥ ಕಾಮಗಾರಿಯ ಭಾಗವಾಗಿ ಬನ್ನಡ್ಕ ಪ್ರದೇಶದಲ್ಲಿ ಬಹುಕಾಲದಿಂದ ಸಾರ್ವಜನಿಕರು ಆಗ್ರಹಿಸುತ್ತಿದ್ದ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಾತ್ವಿಕ ಅನುಮೋದನೆ ನೀಡಿದೆ. ಈ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು ₹5.83 ಕೋಟಿ ವೆಚ್ಚ ನಿಗದಿಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಮೂಡುಬಿದಿರೆ ತೌಳವ ಇಂದ್ರ ಸಮಾಜದಿಂದ ಕೆಸರೊಡ್ ಒಂಜಿ ದಿನ ಗೊಬ್ಬುದ ಲೇಸ್‌

ಮೂಡುಬಿದಿರೆ: ಯುವ ತೌಳವ ಇಂದ್ರ ಸಮಾಜ, ಮಹಿಳಾ ತೌಳವ ಇಂದ್ರ ಸಮಾಜ ಹಾಗೂ ತೌಳವ ಇಂದ್ರ ಸಮಾಜ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಹೊಸಂಗಡಿ ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರ ಚೈತ್ಯಾಲಯದ ಮುಂಭಾಗದ ಗದ್ದೆಯಲ್ಲಿ ‘ಕೆಸರೊಡ್ ಒಂಜಿ ದಿನ ಗೊಬ್ಬುದ ಲೇಸ್’ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ: ರಾಜೇಶ್ ಕಡಲಕೆರೆ

ದೆಹಲಿಯಲ್ಲಿ ಸರ್ಕಾರದ ಸರ್ವಾಧಿಕಾರ ಧೋರಣೆ ವಿರುದ್ಧ, ವಿದ್ಯಾರ್ಥಿಗಳ ಹಿತರಕ್ಷಣೆ ಹಾಗೂ ನ್ಯಾಯಕ್ಕಾಗಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಹೇಳಿದ್ದಾರೆ.

ಇರುವೈಲಿನಲ್ಲಿ ಗದ್ದೆಗಿಳಿದ 180 ವಿದ್ಯಾರ್ಥಿಗಳು: ಕುಪ್ಪೆಪದವು ಕಾವೇರಿ ವಿದ್ಯಾಲಯದ ಮಕ್ಕಳಿಗೆ ಕೆಸರುಗದ್ದೆಯಲ್ಲಿ ಕೃಷಿ ಪಾಠ

ಮೂಡುಬಿದಿರೆ: ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಕುಪ್ಪೆಪದವು ಕಾವೇರಿ ಆಂಗ್ಲಮಾಧ್ಯಮ ಶಾಲೆಯ 180 ವಿದ್ಯಾರ್ಥಿಗಳು ಇರುವೈಲಿನ ದಿಡ್ಡು ಧರ್ಮರಸು ಉಳ್ಳಾಯ ಕೊಡಮಣಿತ್ತಾಯ ಮೂಲ ದೈವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ನೇಜಿ ನಾಟಿಯಲ್ಲಿ ಪಾಲ್ಗೊಂಡು ಕೃಷಿ ಪಾಠ ಕಲಿತರು.

ಕಾಂತಾವರದಲ್ಲಿ ಜು.26ರಂದು 12 ತಾಸಿನ ‘ಯಕ್ಷೋಲ್ಲಾಸ 2026’: ಯಕ್ಷದೇಗುಲ ಪ್ರಶಸ್ತಿ ಪ್ರದಾನ, ತಾಳಮದ್ದಳೆ, ಯಕ್ಷಗಾನ

ಮೂಡುಬಿದಿರೆ: ಕಾಂತಾವರದ ಯಕ್ಷದೇಗುಲದ 24ನೇ ವಾರ್ಷಿಕ ಕಾರ್ಯಕ್ರಮ ಅಂಗವಾಗಿ ಜುಲೈ 26ರಂದು ಕಾಂತಾವರ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ 12 ತಾಸುಗಳ ಕಾಲ ‘ಯಕ್ಷೋಲ್ಲಾಸ 2026’ ಕಾರ್ಯಕ್ರಮ ನಡೆಯಲಿದೆ.

ಮೂಡುಬಿದಿರೆ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಮೊಸರು ಕುಡಿಕೆ ಉತ್ಸವ- ಸಾಂಸ್ಕೃತಿಕ ಕಲಾಪಗಳ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ: ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಆಯೋಜಿಸಿರುವ 40ನೇ ವರ್ಷದ ಸಾಂಸ್ಕೃತಿಕ ಕಲಾಪಗಳ ಆಮಂತ್ರಣ ಪತ್ರಿಕೆಯನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಸಮಾಜ ಮಂದಿರದಲ್ಲಿ ಬಿಡುಗಡೆಗೊಳಿಸಿದರು.

ಶಿರ್ತಾಡಿ ಮಕ್ಕಿ ಶಾಲೆಯಲ್ಲಿ 'ಸ್ವಾಸ್ಥ್ಯ ಸಂಕಲ್ಪ': ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರೋಗ್ಯ, ಉತ್ತಮ ಜೀವನ ಶೈಲಿ ಕುರಿತು ಮಾಹಿತಿ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರ್ತಾಡಿ ವಲಯ, ಶಿರ್ತಾಡಿ ಘಟಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಸರ್ಕಾರಿ ಪ್ರೌಢಶಾಲೆ ಮಕ್ಕಿ ಸಂಯುಕ್ತ ಆಶ್ರಯದಲ್ಲಿ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮ ನಡೆಯಿತು.

ಬೆಳವಾಯಿಯಲ್ಲಿ ಜುಲೈ 23ರಂದು ‘ಅಮ್ಮ ಎಲೆಕ್ಟ್ರಿಕಲ್ಸ್’ ಉದ್ಘಾಟನೆ: ವಿದ್ಯುತ್ ಉಪಕರಣಗಳ ಮಾರಾಟ, ಸೇವೆ ಒಂದೇ ಸೂರಿನಡಿ

ಮೂಡುಬಿದಿರೆ: ಬೆಳವಾಯಿಯ ಪೆಟ್ರೋಲ್ ಪಂಪ್ ಎದುರಿನ ಬಾಲಾಜಿ ಆರ್ಕೇಡ್‌ನಲ್ಲಿ ‘ಅಮ್ಮ ಎಲೆಕ್ಟ್ರಿಕಲ್ಸ್’ ನೂತನ ಸೇಲ್ಸ್ ಮತ್ತು ಸರ್ವಿಸ್ ಮಳಿಗೆಯು ಜುಲೈ 23ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟನೆಯಾಗಲಿದೆ.

ನೆಲ್ಲಿಗುಡ್ಡೆ ಬಳಿಕ ಕಾಯರ್‌ಪುಂಡುನಲ್ಲೂ ಅಪಾಯದ ಸ್ಥಿತಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಪುತ್ತಿಗೆ ಗ್ರಾಮಸ್ಥರ ಆಕ್ರೋಶ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯರ್‌ಪುಂಡು ಬಳಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಪರಿಣಾಮ ರಸ್ತೆಯ ತಡೆಗೋಡೆ ಕುಸಿಯುವ ಹಂತಕ್ಕೆ ತಲುಪಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.