ನಮ್ಮ ಕಂಬಳ 2025-26 ಪ್ರಶಸ್ತಿ ಪ್ರದಾನ: ಇರುವೈಲ್ ಪಾಣಿಲ ‘ತಾಟೆ’, ಬೋಳದಗುತ್ತು ‘ದೋಣಿ’ಗೆ ಶ್ರೇಷ್ಠ ಕೋಣ ಪ್ರಶಸ್ತಿ
ಮಂಗಳೂರು : ನಮ್ಮ ಕುಡ್ಲ ಚಾನಲ್, ನಮ್ಮ ಕಂಬಳ ಟೀಂ ದುಬಾಯಿ ಮತ್ತು ಪಾಲೆಮಾರ್ ಗ್ರೂಪ್ ಆಯೋಜಿಸಿದ್ದ ನಮ್ಮ ಕಂಬಳ 2025-26ರ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳವಾರ ಮಂಗಳೂರಿನ ಮೇರಿಹಿಲ್ ಕೊಂಚಾಡಿಯ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು.