ಎಲ್ಲ ಲೇಖನಗಳು

1104 ಲೇಖನಗಳು

ಮುಡಾಯಿಕಾಡು ನಾಗದೇವರ ಸನ್ನಿಧಿಯಲ್ಲಿ ದೇವತಾ ಸೇವೆ; ದೇವಸ್ಥಾನ ನಿರ್ಮಾಣಕ್ಕೆ ಸಿದ್ಧತೆ

ಮೂಡುಬಿದಿರೆ: ಬೆಳುವಾಯಿ ಮುಡಾಯಿಕಾಡು ಶ್ರೀ ನಾಗದೇವರ ಸನ್ನಿಧಿಯಲ್ಲಿ ತನು ತಂಬಿಲ ಸೇವೆ, ದೇವಸ್ಥಾನದಲ್ಲಿ ಹೂವಿನ ಪೂಜೆ ಸೇರಿದಂತೆ ವಿವಿಧ ದೇವತಾ ಸೇವೆಗಳ ಪೂಜೆ ನೆರವೇರಿಸಲಾಯಿತು. ಪೂಜಾ ಸಾಹಿತ್ಯ ಒದಗಿಸಿ ಪೂರ್ಣ ಸಹಕಾರ ನೀಡಿದ ಊರ ಹಾಗೂ ಪರಊರ ಭಗವತ್ಭಕ್ತರಿಗೆ ಶ್ರೀ ನಾಗಬ್ರಹ್ಮ ಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಕಂಬಳ ಕ್ಷೇತ್ರದಲ್ಲೂ ಬರಲಿದೆ ಲೈವ್ ಸ್ಕೋರ್ ಬೋರ್ಡ್: ನಮ್ಮ ಕಂಬಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪರಿಕಲ್ಪನೆ ಅನಾವರಣ

ಕಂಬಳ ಕೂಟ ನಡೆಯುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್ ಮ್ಯಾಚ್ ಮಾದರಿಯಲ್ಲಿ ಕಂಬಳ ಕೋಣಗಳ ಓಟದ ಸಂಪೂರ್ಣ ಮಾಹಿತಿ ನೀಡುವ ಲೈವ್ ಸ್ಕೋರ್ ಬೋರ್ಡ್ ಇನ್ನು ಮುಂದೆ ವೀಕ್ಷಕರಿಗೆ ಲಭ್ಯವಾಗಲಿದೆ. ನಮ್ಮ ಕುಡ್ಲ ವಾಹಿನಿ ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಮಂಗಳವಾರ ನಡೆದ ನಮ್ಮ ಕಂಬಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದರ ಪರಿಕಲ್ಪನೆಯನ್ನು ಅನಾವರಣಗೊಳಿಸಲಾಯಿತು.

ನಮ್ಮ ಕಂಬಳ 2025-26 ಪ್ರಶಸ್ತಿ ಪ್ರದಾನ: ಇರುವೈಲ್ ಪಾಣಿಲ ‘ತಾಟೆ’, ಬೋಳದಗುತ್ತು ‘ದೋಣಿ’ಗೆ ಶ್ರೇಷ್ಠ ಕೋಣ ಪ್ರಶಸ್ತಿ

ಮಂಗಳೂರು : ನಮ್ಮ ಕುಡ್ಲ ಚಾನಲ್, ನಮ್ಮ ಕಂಬಳ ಟೀಂ ದುಬಾಯಿ ಮತ್ತು ಪಾಲೆಮಾರ್ ಗ್ರೂಪ್ ಆಯೋಜಿಸಿದ್ದ ನಮ್ಮ ಕಂಬಳ 2025-26ರ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳವಾರ ಮಂಗಳೂರಿನ ಮೇರಿಹಿಲ್ ಕೊಂಚಾಡಿಯ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು.

ಒಂಟಿಕಟ್ಟೆ 37ನೇ ವರ್ಷದ ಗಣೇಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ: ಒಂಟಿಕಟ್ಟೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 37ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು. ಒಂಟಿಕಟ್ಟೆಯ ಅಯ್ಯಪ್ಪ ಮಂದಿರದಲ್ಲಿ ಸೆಪ್ಟೆಂಬರ್ 14ರಿಂದ 16ರವರೆಗೆ ಗಣೇಶೋತ್ಸವ ನಡೆಯಲಿದ್ದು, ಸೋಮವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಪಡ್ಡಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನದಲ್ಲಿ ಆಟಿದ ಕೋಲ, ತುಲಾಭಾರ ಸೇವೆ

ಮೂಡುಬಿದಿರೆ: ಬೆಳ್ತಂಗಡಿ ತಾಲೂಕಿನ ಪೆರಿಂಜೆ ಗ್ರಾಮದ ಶ್ರೀ ಕ್ಷೇತ್ರ ಪಡ್ಡಾರಬೆಟ್ಟು ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಸಿಂಹ ಸಂಕ್ರಮಣ ಪ್ರಯುಕ್ತ ಹೂವಿನ ಪೂಜೆ, ಅನ್ನಸಂತರ್ಪಣೆ, ಆಟಿದ ಕೋಲ ಹಾಗೂ ತುಲಾಭಾರ ಸೇವೆ ನಡೆಯಿತು.

ಮೂಡುಬಿದಿರೆ ವಲಯ ಸಂಯುಕ್ತ ಜಮಾತ್‌ನ 14 ಮೊಹಲ್ಲಾಗಳ ಖಾಝಿಯಾಗಿ ಜಿಫ್ರಿ ತಂಙಳ್ ಅಧಿಕಾರ ಸ್ವೀಕಾರ

ಮೂಡುಬಿದಿರೆ ವಲಯ ಸಂಯುಕ್ತ ಜಮಾತ್ ವ್ಯಾಪ್ತಿಯ 14 ಮೊಹಲ್ಲಾಗಳ ಖಾಝಿಯಾಗಿ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಮಂಗಳವಾರ ಸಂಜೆ ಗಂಟಾಲ್ಕಟ್ಟೆಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆದ ಖಾಝಿ ಸ್ವೀಕಾರ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.

ಭಾರತ್ ಜೋಡೋ ಯುವ ಸಂಘಟನೆ ಸ್ಥಾಪನೆಗೆ ಪುರಸಭೆ ಸಿದ್ಧತಾ ಸಭೆ: 6 ಸಂಘಗಳ ರಚನೆಗೆ ಅವಕಾಶ; ಪ್ರತಿ ಸಂಘಕ್ಕೆ 100 ಯುವಕರು, ತಲಾ ರೂ.10 ಲಕ್ಷ ಅನುದಾನ

ಮೂಡುಬಿದಿರೆ: ಭಾರತ್ ಜೋಡೋ ಯುವ ಸಂಘಟನೆ ಸ್ಥಾಪನೆಗೆ ಮೂಡುಬಿದಿರೆ ಪುರಸಭೆಯು ಮಂಗಳವಾರ ಸಿದ್ಧತಾ ಸಭೆ ನಡೆಸಿತು. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಪುರಸಭೆ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಸಂಘಟನೆಗಳನ್ನು ಸ್ಥಾಪಿಸುವ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಶಿರ್ತಾಡಿಯಲ್ಲಿ 'ವಾಗಾಂಚೊ ಖೆಳ್’ ಕೊಂಕಣಿ ಚಲನಚಿತ್ರ ಪ್ರದರ್ಶನ: ಕಥೊಲಿಕ್ ಸಭಾದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಸಹಾಯ

ಕಥೊಲಿಕ್ ಸಭಾ ಶಿರ್ತಾಡಿ ಘಟಕದ 30ನೇ ವರ್ಷಾಚರಣೆ ಅಂಗವಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಯೋಜನೆಗೆ ಸಹಾಯಾರ್ಥವಾಗಿ ‘ವಾಗಾಂಚೊ ಖೆಳ್’ ಕೊಂಕಣಿ ಚಲನಚಿತ್ರವನ್ನು ಹೋಲಿ ಏಂಜಲ್ಸ್ ಕನ್ನಡ ಮಾಧ್ಯಮ ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು.

ಬೆದ್ರ ದೇವಾಡಿಗ ಸಂಘದಿಂದ 14ನೇ ವರ್ಷದ ಆಟಿಡೊಂಜಿ ದಿನ: ಆಟಿ ಆಚರಣೆ ಔತಣ ಕೂಟಕ್ಕೆ ಸೀಮಿತವಾಗದಿರಲಿ-ಚಂದ್ರಹಾಸ್ ದೇವಾಡಿಗ

ಮೂಡುಬಿದಿರೆ: ಆಟಿ ತಿಂಗಳು ಕೇವಲ ಸಂಭ್ರಮ ಮತ್ತು ಔತಣ ಕೂಟಕ್ಕೆ ಸೀಮಿತವಾಗಿರದೆ, ಹಿಂದಿನ ಕಾಲದ ಕಷ್ಟದ ಬದುಕನ್ನು ಇಂದಿನ ಮಕ್ಕಳಿಗೆ ತಿಳಿಸುವ ಸಂದರ್ಭವಾಗಬೇಕು ಎಂದು ಬೆದ್ರ ತುಳುಕೂಟ ಸ್ಥಾಪಕ ಅಧ್ಯಕ್ಷ, ಎಲ್ಐಸಿ ಸಲಹಾ ಅಧಿಕಾರಿ ಚಂದ್ರಹಾಸ ದೇವಾಡಿಗ ಹೇಳಿದರು.

ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ಖಾಝಿಯಾಗಿ ನೇಮಕ: ಆಗಸ್ಟ್ 18ಕ್ಕೆ ಸ್ವೀಕಾರ ಸಮಾರಂಭ

ಮೂಡುಬಿದಿರೆ: ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ವ್ಯಾಪ್ತಿಯ 14 ಮೊಹಲ್ಲಾಗಳ ನೂತನ ಖಾಝಿಯಾಗಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಮಂಡಳಿ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ನೇಮಕಗೊಂಡಿದ್ದು, ಅವರ ಖಾಝಿ ಪದವಿ ಸ್ವೀಕಾರ ಸಮಾರಂಭವು ಆಗಸ್ಟ್ 18ರ ಮಂಗಳವಾರ ಸಂಜೆ 3 ಗಂಟೆಗೆ ಗಂಟಾಲಕಟ್ಟೆಯ ಬದ್ರಿಯಾ ಜುಮಾ ಮಸೀದಿ ಪರಿಸರದಲ್ಲಿ ಜರುಗಲಿದೆ ಎಂದು ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೈನಕಾಶಿಯಲ್ಲಿ ನಾಗಾರಾಧನೆ: 18 ಬಸದಿ ಗಳಲ್ಲಿ ಭಕ್ತರಿಂದ ವಿಶೇಷ ಪೂಜೆ

ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ ಎಲ್ಲ 18 ಬಸದಿ ಗಳಲ್ಲಿ ಸೋಮವಾರ ಬಸದಿ ಮೂಲಸ್ವಾಮಿಗೆ ಅಭಿಷೇಕ ನಡೆಯಿತು. ಆಯಾ ಬಸದಿ ಗಳಿಗೆ ಸಂಬಂಧಪಟ್ಟ ಭಕ್ತರು ನಾಗಬನಗಳಿಗೆ ತೆರಳಿ ನಾಗದೇವರಿಗೆ ಹಾಲು, ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಮೂಡುಬಿದಿರೆ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡುಬಿದಿರೆ: ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ ವತಿಯಿಂದ ಸಮಾಜ ಮಂದಿರದಲ್ಲಿ ಸೆ.14ರಿಂದ 18ರವರೆಗೆ ನಡೆಯಲಿರುವ ಮೂಡುಬಿದಿರೆ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸ್ತ್ರೀರೋಗ ತಜ್ಞ ಡಾ. ರಮೇಶ್ ಹಾಗೂ ಉದ್ಯಮಿ ಜಯರಾಮ್ ಕೋಟ್ಯಾನ್ ಸೋಮವಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.

ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ಖಾಝಿಯಾಗಿ ನೇಮಕ: ಆಗಸ್ಟ್ 18ಕ್ಕೆ ಸ್ವೀಕಾರ ಸಮಾರಂಭ

ಮೂಡುಬಿದಿರೆ: ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ವ್ಯಾಪ್ತಿಯ 14 ಮೊಹಲ್ಲಾಗಳ ನೂತನ ಖಾಝಿಯಾಗಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಮಂಡಳಿ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ನೇಮಕಗೊಂಡಿದ್ದು, ಅವರ ಖಾಝಿ ಪದವಿ ಸ್ವೀಕಾರ ಸಮಾರಂಭವು ಆಗಸ್ಟ್ 18ರ ಮಂಗಳವಾರ ಸಂಜೆ 3 ಗಂಟೆಗೆ ಗಂಟಾಲಕಟ್ಟೆಯ ಬದ್ರಿಯಾ ಜುಮಾ ಮಸೀದಿ ಪರಿಸರದಲ್ಲಿ ಜರುಗಲಿದೆ ಎಂದು ಮೂಡುಬಿದಿರೆ ವಲಯ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಂಪದವು ಸಂಕೇಶ ನಾಗಬನದಲ್ಲಿ ನಾಗರ ಪಂಚಮಿ: ಮನೆಯಲ್ಲೇ ಬೆಳೆದ ಹೂಗಳಿಂದ ನಾಗದೇವರ ಬಿಂಬಗಳಿಗೆ ಅಲಂಕಾರ- ಪ್ಲಾಸ್ಟಿಕ್ ಮುಕ್ತ ಆಚರಣೆಗೆ ಒತ್ತು

ಮೂಡುಬಿದಿರೆ: ಕುಡುಬಿ ಸಮಾಜದ ಪ್ರಮುಖ ಕೊಂಪದವು ಸಂಕೇಶ ನಾಗಬನದಲ್ಲಿ ನಾಗರ ಪಂಚಮಿ ಆಚರಣೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಾಗದೇವರಿಗೆ ಹಾಲಾಭಿಷೇಕ, ಸಿಯಾಳಾಭಿಷೇಕ, ತನು ತಂಬಿಲ ಸಮರ್ಪಣೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.

ಕಲ್ಲಬೆಟ್ಟುವಿನಲ್ಲಿ 25ನೇ ವರ್ಷದ ಗಣೇಶೋತ್ಸವ: ಆಮಂತ್ರಣ ಪತ್ರಿಕೆ, ರಜತ ಸಂಭ್ರಮ ಲೋಗೋ ಬಿಡುಗಡೆ

ಮೂಡುಬಿದಿರೆ: ಗಣೇಶೋತ್ಸವ ಸಮಿತಿ ಕಲ್ಲಬೆಟ್ಟು, ಕರಿಂಜೆ, ಮಾರೂರು ಇದರ 25ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ರಜತ ಸಂಭ್ರಮ ಲೋಗೋ ಬಿಡುಗಡೆ ಕಾರ್ಯಕ್ರಮ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‌ನ ಅಕ್ಷಯಧಾಮ ಸಭಾಭವನದಲ್ಲಿ ನಡೆಯಿತು.

ಮೂಡುಬಿದಿರೆ ಬಿಲ್ಲವ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಆಟಿಡೊಂಜಿ ದಿನ

ಮೂಡುಬಿದಿರೆ: ಆಟಿ ತಿಂಗಳ ಕಷ್ಟದ ದಿನಗಳ ನೆನಪಿಗಿಂತ ಜಾನಪದ ಬದುಕಿನ ಸೊಗಡನ್ನು ಪರಿಚಯಿಸುವ ‘ಆಟಿಡೊಂಜಿ ದಿನ’ದ ಮೂಲಕ ಸಂಸ್ಕೃತಿ, ಸಮಾಜದ ಏಳಿಗೆ ಹಾಗೂ ಯುವಜನರ ಜವಾಬ್ದಾರಿಯ ಕುರಿತು ಚರ್ಚೆ ನಡೆಯಿತು. ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣ ಗುರು ಸೇವಾದಳ ಹಾಗೂ ಶ್ರೀ ನಾರಾಯಣ ಗುರು ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಹಾಗೂ ಪದಗ್ರಹಣ 2026 ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಶಿಕ್ಷಕಿ ಜಯಂತಿ ಕಟೀಲ್ ಮಾತನಾಡಿ, ಆಟಿ ತಿಂಗಳಲ್ಲಿ ಇಂದು ಕಷ್ಟದ ದಿನಗಳಿಲ್ಲ. ‘ಆಟಿಡೊಂಜಿ ದಿನ’ ಜಾನಪದ ಶೈಲಿಯಲ್ಲಿ ಆಚರಿಸುವ ದಿನವಾಗಿದೆ. ವರ್ಷದ ಪ್ರತಿಯೊಂದು ತಿಂಗಳಿಗೂ ಮಹತ್ವವಿದ್ದು, ಹಿಂದೂ ಧರ್ಮದ ಹಬ್ಬಗಳ ಸರಮಾಲೆ 12 ತಿಂಗಳಲ್ಲೂ ಬರುತ್ತದೆ ಎಂದರು.

ಸುಮಾರು 3 ಸಾವಿರ ಜನರಿಂದ ಸಾವಿರ ಕಂಬಗಳ ಬಸದಿ ವಿದ್ಯುತ್ ದೀಪಾಲಂಕಾರ ವೀಕ್ಷಣೆ

ಮೂಡುಬಿದಿರೆಯ ಸಾವಿರ ಕಂಬಗಳ ಬಸದಿಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ವಿಶೇಷ ವಿದ್ಯುತ್ ದೀಪಾಲಂಕಾರ ಕಾರ್ಯಕ್ರಮಕ್ಕೆ ಸುಮಾರು 3,000 ಜನರು ಆಗಮಿಸಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಳ್ವಾಸ್‌ನಲ್ಲಿ ‘ಅಂಬೇಡ್ಕರ್ ಓದು’: ಸಂವಿಧಾನದ ಮೌಲ್ಯ ಅರಿಯಲು ವಿದ್ಯಾರ್ಥಿಗಳಿಗೆ ಕರೆ

ಮೂಡುಬಿದಿರೆ: ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ ಎಂ.ಜಿ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮೂಡುಬಿದಿರೆಯ ಶುಭಾಶಯ ಜೈನ್ ವಿರಚಿತ ‘ಹೇಮಾದ್ರಿ ಗಿರಿಬಾಲೆ’ ಪ್ರಸಂಗ ಪ್ರಥಮ ಪ್ರದರ್ಶನ

ಮೂಡುಬಿದಿರೆ: ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಶುಭಾಶಯ ಜೈನ್ ವಿರಚಿತ ‘ಹೇಮಾದ್ರಿ ಗಿರಿಬಾಲೆ’ ಪ್ರಥಮ ಯಕ್ಷಗಾನ ಪ್ರಸಂಗವು ಆಗಸ್ಟ್ 16ರಂದು ಕುಂದಾಪುರದ ಹಂಗಾರಕಟ್ಟೆ ಕೇಂದ್ರದ ಸಭಾಭವನದಲ್ಲಿ ಪ್ರದರ್ಶನಗೊಂಡಿತು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್, ವಂಡಾರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಂಧರ್ವರ ಜನ್ಮಾಂತರಗಳ ಪ್ರೀತಿ, ದ್ವೇಷ, ಶಾಪ, ವರ ಹಾಗೂ ಧರ್ಮದ ವಿಜಯದ ಕಥಾನಕ ಮೂಡಿಬಂತು.

ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ಆಟಿಕೂಟ: ತುಳುನಾಡಿನ ಸಂಸ್ಕೃತಿ, ಆಹಾರ ಪದ್ಧತಿ, ಪಾರಂಪರಿಕ ಜೀವನಶೈಲಿಯ ಪರಿಚಯ

ಮೂಡುಬಿದಿರೆ: ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿಕೂಟ ಕಾರ್ಯಕ್ರಮ ನಡೆಯಿತು. ಹನುಮಗಿರಿ ಮೇಳದ ಭಾಗವತ ರವಿಚಂದ್ರ ಕನ್ನಡಿಕಟ್ಟೆ ದೀಪ ಪ್ರಜ್ವಲನೆ ನೆರವೇರಿಸಿ, ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಕಳಸೆಯಲ್ಲಿ ಇರಿಸಿದ ಭತ್ತದ ರಾಶಿಯ ಮಧ್ಯದ ತೆಂಗಿನ ಕೊಂಬನ್ನು ಅರಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಾರಾವಿಯಲ್ಲಿ ಜೈನ್ ಮಿಲನ್ ‘ಆಟಿಡೊಂಜಿ ದಿನ’: ಯಕ್ಷಗಾನ ಕಲಾವಿದ ಶ್ರುತಕೀರ್ತಿರಾಜ, ಸಾಹಿತಿ ಶ್ವೇತಾ ದಿಲೀಪ್ ಜೈನ್‌ಗೆ ಸನ್ಮಾನ

ನಾರಾವಿ: ಭಾರತೀಯ ಜೈನ್ ಮಿಲನ್ ನಾರಾವಿ ಶಾಖೆಯ ಆಶ್ರಯದಲ್ಲಿ ನಾರಾವಿ ಬಸದಿಯ ಧರ್ಮಶ್ರೀ ಸಭಾಭವನದಲ್ಲಿ ಆಯೋಜಿಸಿದ್ದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಉಜಿರೆ ಯುಎಸ್ಡಿಎಂ ಕಾಲೇಜಿನ ಉಪನ್ಯಾಸಕರಾಗಿದ್ದ, ಯಕ್ಷಗಾನ ಕಲಾವಿದ ಹಾಗೂ ತಾಳಮದ್ದಳೆ ಅರ್ಥಧಾರಿ ಶ್ರುತಕೀರ್ತಿರಾಜ ಮತ್ತು ಯುವ ಸಾಹಿತಿ, ಲೇಖಕಿ ಹಾಗೂ ಅಂಕಣಕಾರ್ತಿ ಶ್ವೇತಾ ದಿಲೀಪ್ ಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಾಗರಪಂಚಮಿ: ಆಗಸ್ಟ್ 17ರಂದು ದ.ಕ, ಉಡುಪಿ ಜೆಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿಗಳಿಗೆ ರಜೆ

ನಾಗರಪಂಚಮಿ ಪ್ರಯುಕ್ತ ಆಗಸ್ಟ್ 17, ಸೋಮವಾರ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ

ಮೂಡುಬಿದಿರೆಯಲ್ಲಿ ಆಗಸ್ಟ್ 19ರಂದು SKPA ವಲಯದಿಂದ ‘ಬಾಂಧವ್ಯ 2026’ ಕಾರ್ಯಕ್ರಮ

ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಮೂಡುಬಿದಿರೆ ವಲಯದ ವತಿಯಿಂದ ವಲಯದ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ‘ಬಾಂಧವ್ಯ 2026 - ಛಾಯಾ ಕುಟುಂಬದ ಸಂಭ್ರಮ’ ಕಾರ್ಯಕ್ರಮವನ್ನು ಆಗಸ್ಟ್ 19ರಂದು ಸಂಜೆ 6 ಗಂಟೆಗೆ ಮೂಡುಬಿದಿರೆಯ ಕಲ್ಪವೃಕ್ಷ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.