ಮೈಸೂರು ದಸರಾದಲ್ಲಿ ಕಂಬಳ?: ಶಿವಮೊಗ್ಗದಲ್ಲಿ ಸಿದ್ಧತೆ, ಕನಕಪುರದಲ್ಲಿ ಕಂಬಳ ಆಯೋಜನೆಗೆ ಒಲವು
ಮೂಡುಬಿದಿರೆ: ರಾಜ್ಯದ ಸಾಂಸ್ಕೃತಿಕ ಪರಂಪರೆಯಾದ ಕಂಬಳವನ್ನು ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಆಯೋಜಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಈ ಕುರಿತು ಜೂನ್ 20ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಮುಖ್ಯಮಂತ್ರಿಗಳ ಆಶಯದಂತೆ ಈ ಸಭೆ ಆಯೋಜಿಸಲಾಗಿದೆ.