ಅಶ್ವತ್ಥಪುರ ಮಂಗೇಬೆಟ್ಟು ಕಿರು ಸೇತುವೆ ಬಿರುಕು; ಬದಿ ಕುಸಿತ, ಘನ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ
ಮೂಡುಬಿದಿರೆ: ಅಶ್ವತ್ಥಪುರ–ಒಂಟಿಮಾರು–ಮುಚ್ಚೂರು ಸಂಪರ್ಕ ರಸ್ತೆಯ ಮಂಗೇಬೆಟ್ಟು ಪ್ರದೇಶದಲ್ಲಿರುವ ಕಿರು ಸೇತುವೆಗೆ ಬಿರುಕು ಕಾಣಿಸಿಕೊಂಡಿದ್ದು, ಅದರ ಒಂದು ಬದಿಯಲ್ಲಿ ಕುಸಿತವೂ ಉಂಟಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಗ್ರಾಮ ಪಂಚಾಯಿತಿ ಪ್ರಕಟಣೆ ಹೊರಡಿಸಿದೆ.