ಮೂಡುಬಿದಿರೆ ಬಂಟರ ಸಂಘದ ಮಹಿಳಾ ಘಟಕದಿಂದ ಆಟಿಡೊಂಜಿ ದಿನ: ಬಂಟ ಸಮಾಜ ಸಂಘಟಿತರಾಗಿ ಮುನ್ನಡೆಯಲಿ- ಮೋಹನ ಆಳ್ವ
ಮೂಡುಬಿದಿರೆ: ಬಂಟ ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಒಂದೇ ಮನಸ್ಸಿನಿಂದ ಸಂಘಟಿತರಾಗಿ ಸಮಾಜವನ್ನು ಮುನ್ನಡೆಸುವುದು ಎಲ್ಲರ ಕರ್ತವ್ಯ. ಹಿರಿಯರು ಕಟ್ಟಿಕೊಟ್ಟ ಪರಂಪರೆ, ಸಂಸ್ಕೃತಿ ಹಾಗೂ ಘನತೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ. ಎಂ. ಮೋಹನ್ ಆಳ್ವ ಹೇಳಿದರು.